ಬಾಲ್ಯದ ದ್ವೇಷಕ್ಕೆ 50 ವರ್ಷಗಳ ನಂತರ ಸೇಡು: ಕಾಸರಗೋಡಿನಲ್ಲಿ ಇಬ್ಬರು ಬಂಧನ

ಕಾಸರಗೋಡು, ಜೂನ್ 11: ಚಿಕ್ಕವರಿದ್ದಾಗ ಹೊಡೆದಾಡಿಕೊಳ್ಳುವುದು, ಸಣ್ಣ ಪುಟ್ಟ ವಿಚಾರಕ್ಕೂ ಮುನಿಸಿಕೊಂಡು ಮಾತುಬಿಡುವುದು ಇವೆಲ್ಲವೂ ಸಾಮಾನ್ಯ. ಆದರೆ ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು 50 ವರ್ಷ ಕಳೆದರೂ ಮರೆತಿರಲಿಲ್ಲ. ಶಾಲೆಯ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ .ಬಾಲಕೃಷ್ಣನ್ ಅವರ…

Read More

ಕುಟುಂಬಕ್ಕೆ ಕಂಟಕವಾಗಿದ್ದ ಅಣ್ಣ; ಪೆಟ್ರೋಲ್ ಸುರಿದು ಕೊಂದ ತಮ್ಮ: ತಪ್ಪೊಪ್ಪಿಕೊಂಡ ಆರೋಪಿ!

ಕಡಬ ಜೂನ್ 10: ಸ್ವಂತ ಅಣ್ಣನಿಗೆ ಪೆಟ್ರೋಲ್ ಸುರಿದು ತಮ್ಮನೇ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ , ಗಂಭೀರವಾಗಿ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಣ್ಣ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಇದೀಗ ತಮ್ಮನ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿ. ಮೊದಲು ಕಡಬ ಪೊಲೀಸರ ವಶದಲ್ಲಿದ್ದ ಈತನನ್ನು ಜೂನ್ 8 ರಾತ್ರಿ ಮಂಗಳೂರು ವಿಭಾಗದ ರೈಲ್ವೇ…

Read More

ಸುಬ್ರಹ್ಮಣ್ಯದಲ್ಲಿ ಕೊಠಡಿ ವಿಚಾರಕ್ಕೆ ಯುವಕನಿಗೆ ಹಲ್ಲೆ

ಸುಬ್ರಹ್ಮಣ್ಯ: ಕೊಠಡಿ ಬಾಡಿಗೆಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಕೃತ್ಯದ ವೀಡಿಯೋ ವೈರಲ್‌ ಆಗಿದೆ. ಯುವಕನೋರ್ವ ಕೊಠಡಿಯನ್ನು ವೀಕ್ಷಿಸಿದ ಬಳಿಕ ಅದನ್ನು ಪಡೆಯದೇ ತೆರಳಿದ ಕಾರಣಕ್ಕೆ ಕೊಠಡಿಯನ್ನು ನಿರ್ವಹಿಸುವ ತಂಡ ವಾಗ್ವಾದಕ್ಕಿಳಿಯಿತು. ಬಳಿಕ ಯುವಕನ ಮೇಲೆ ತಂಡದ ಓರ್ವ ಸದಸ್ಯ ಹಲ್ಲೆ ನಡೆಸಿದನು. ಸುಬ್ರಹ್ಮಣ್ಯದಲ್ಲಿ ಕೆಲವೆಡೆ ಹೊರಗಿನವರು ರೂಂಗಳನ್ನು ಲೀಸ್‌ಗೆ ಪಡೆದುಕೊಂಡು ಯಾತ್ರಿಕರಿಗೆ ಪೂರೈಸುವ ಕೆಲಸ ಮಾಡುತ್ತಿದ್ದು ಅವರು ಈ ಕೃತ್ಯ ಎಸಗಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ….

Read More

ವೈರಲ್ ತಲ್ವಾರ್ ಫೋಟೋ ಸುಳ್ಳು ಎಂದು ದೃಢ – ತಪ್ಪು ಸುದ್ದಿ ಹರಡಿಸಿದವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು ಜೂನ್ 07: ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ತಲ್ವಾರ್ ಹಿಡಿದು ಬೈಕ್ ಸವಾರರು ತಿರುಗಾಡುತ್ತಿದ್ದಾರೆ ಎಂಬ ಪೋಟೋ ಮತ್ತು ವಾಯ್ಸ್ ಕ್ಲಿಪ್ ವೈರಲ್ ಆಗಿದ್ದು, ಇದೀಗ ಈ ಮಾಹಿತಿ ಸಂಪೂರ್ಣ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ತಪ್ಪು ಮಾಹಿತಿ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ…

Read More

ಪತಿ ನಾಪತ್ತೆ: ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೆಬ್ರಿ: ಹೆಬ್ರಿಯ ತಮ್ಮ ಮನೆಯಿಂದ ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ವಸಂತಿ ಎಂಬವರ ಪತಿ ಪ್ರಭಾಕರ(46ವರ್ಷ) ನಾಪತ್ತೆಯಾದವರು. ಪ್ರಭಾಕರ ಅವರು ಈ ಹಿಂದೆ ಸುಮಾರು 5-6 ಬಾರಿ ಮನೆಯಿಂದ ಕೆಲಸಕ್ಕೆಂದು ಹೋದವರು ಸುಮಾರು 2-3 ತಿಂಗಳವರೆಗೆ ಇದ್ದು ನಂತರ ಮನೆಗೆ ವಾಪಾಸಾಗುತ್ತಿದ್ದರು. ಆದರೆ 2023 ರ ಡಿಸೆಂಬರ್‌ನಲ್ಲಿ ಮನೆಯಿಂದ ಹೋದವರು ಈವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More