ಕರಾವಳಿ ಕರ್ನಾಟಕದಲ್ಲಿ ಮುಂಗಾರು ಆರ್ಭಟ: ಜೂನ್ 16 ರವರೆಗೆ ರೆಡ್ ಅಲರ್ಟ್ ಘೋಷಣೆ, ಶಾಲೆಗಳಿಗೆ ರಜೆ ವಿಸ್ತರಣೆ

ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮುಂಗಾರು ಚುರುಕಾಗಿದ್ದು, ಗುರುವಾರ ವ್ಯಾಪಕ ಮತ್ತು ತೀವ್ರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜೂನ್ 16 ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಪೂರ್ತಿ ಮಧ್ಯಂತರ ಮಳೆಯಾದ ವರದಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಭಾರೀ ಮಳೆಯ ಹಿನ್ನೆಲೆಯಲ್ಲಿ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರವೂ ಶಾಲೆಗಳಿ ರಜೆ….

Read More

ಮಂಗಳೂರಿನಲ್ಲಿ ಅಪಾಯಕಾರಿ ಬೈಕ್ ಸವಾರಿಗೆ ಬ್ರೇಕ್ ಹಾಕಿ: ಸಾರ್ವಜನಿಕರ ಆಗ್ರಹ

ಮಂಗಳೂರು, ಜೂ. 12 : ನಗರದಲ್ಲಿ ಅಪಾಯಕಾರಿ ಹಾಗೂ ಕಾನೂನುಬಾಹಿರ ಬೈಕ್ ಸವಾರಿಯ ಎರಡು ಘಟನೆಗಳು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೊದಲ ಘಟನೆ ಜೂನ್ 7 ರಂದು ಸಂಜೆ ಯೆನೆಪೋಯ (ದೇರಳಕಟ್ಟೆ)ಯಿಂದ ಕೆ.ಎಸ್. ಹೆಗ್ಡೆ ಮಾರ್ಗದಲ್ಲಿ ಸಂಭವಿಸಿದೆ. KA 19 HL 7316 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಇದು ಸಂಚಾರ ನಿಯಮದ ಉಲ್ಲಂಘನೆಯಾಗಿರುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ನಾಲ್ವರ ಈ…

Read More

ಕುಂದಾಪುರ ಮಹಿಳೆ ನಾಪತ್ತೆ ಪ್ರಕರಣ: ಮೂರು ದಿನಗಳಿಂದ ಹೀನಾ ಕೌಸರ್ ಸುಳಿವೇ ಇಲ್ಲ

ಕುಂದಾಪುರ, ಜೂ. 12 : ಕುಂದಾಪುರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್(32) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್‌ಆಫ್ ಆಗಿದೆ. ಪತ್ನಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಮಹಮ್ಮದ್ ಇಕ್ಬಾಲ್ ಊರಿಗೆ ಮರಳಿದ್ದಾರೆ.ಜೆಎಲ್‌ಬಿ ರಸ್ತೆಯ ಮನೆಯಲ್ಲಿ ತಾಯಿ ಹಾಗೂ…

Read More

ಮಂಗಳೂರಿನಲ್ಲಿ ಟಿಂಟೆಡ್ ಗ್ಲಾಸ್ ವಿರುದ್ಧ ವಿಶೇಷ ಪೊಲೀಸ್ ಕಾರ್ಯಾಚರಣೆ

ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಟಿಂಟ್ ಗ್ಲಾಸ್ ಆಳವಡಿಸಿರುವ ಕಾರುಗಳ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಎರಡು ದಿನಗಳ ಅಂತರದಲ್ಲಿ 223 ಪ್ರಕರಣ ದಾಖಲಿಸಿ  1 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 02-06-2025 ಮತ್ತು 03-06-2025 ರಂದು ನಗರದ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯವರು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿ ಕಾರಿನ ಗ್ಲಾಸ್ಗಳಲ್ಲಿ ಬ್ಲಾಕ್ ಫಿಲ್ಮ್(ಸನ್ ಫಿಲ್ಮ್) ಅಥವಾ ಟಿಂಟೆಡ್…

Read More