
ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಹಳೇಕೋಟೆ ಇದರ ಆಶ್ರಯದಲ್ಲಿ ನಡೆಯುವ ಅನುದಾನಿತ ಶಾಲೆ ಸೈಯದ್ ಮದನಿ ಶಾಲೆ ಇದರ ಕ್ರೀಡೋತ್ಸವ ದ ಬಹುಮಾನ ವಿತರಣಾ ಸಮಾರಂಭವು ಡಿ.23ರಂದು ಹೊಸಕೋಟೆ ಉಳ್ಳಾಲದಲ್ಲಿ ನಡೆಯಿತು.




ಸೈಯದ್ ಮದನಿ ದರ್ಗಾದ ಅಧ್ಯಕ್ಷರಾದ ಜನಾಬ್ ಹಾಜಿ ಬಿ.ಜಿ. ಹನೀಪ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಿಲ್ ದಾಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಯ್ಯದ್ ಮದನಿ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಲಯನ್ ಅನಿಲ್ ದಾಸ್ ರವರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಮಕ್ಕಳಲ್ಲಿ ಕ್ರೀಡಾಸಕ್ತಿ ಹಾಗೂ ಸಮಾಜ ಸೇವೆ. ಉತ್ತಮ ಗುಣನಡತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಶಿಕ್ಷಣ ಸಂಸ್ಥೆಯ ಪಾತ್ರವನ್ನು ಕೊಂಡಾಡಿದರು.



ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಮ್ ಕೆ ಮಂಜನಾಡಿ ಹಾಗೂ ಶಿಕ್ಷಣಾಧಿಕಾರಿಗಳಾದ ಶ್ರೀ ಸುಭಾಸ್ ಈಶ್ವರ್, ಶಶಿಧರ್, ಜನಾಬ್ ಹನಿಫ್ ಮೈಸೂರು, ಸಂತೋಷ್, ಸುಷ್ಮಾ, ಜನಾಬ್ ಅಶ್ರಪ್ ಅಹ್ಮದ್ ರೈಟ್ ವೇ, ಜನಾಬ್ ಹಾಜಿ ಮಹಮ್ಮದ್ ತ್ವಾಹಾ, ಜನಾಬ್ ಇಮ್ತಿಯಾಝ್ ಅಹ್ಮದ್, ಜನಾಬ್ ಅಬೂಬಕ್ಕರ್, ಜನಾಬ್ ಹಾಜಿ ಎಂ.ಹೆಚ್ ಮಲಾರ್, ಮೋಹನ್ ಕುಮಾರ್ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

2026ರ ಜ. 4ರಂದು ಮಂಗಳೂರಿನ ಪುರಭವನದಲ್ಲಿ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಸಹಯೋಗದಲ್ಲಿ ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುಖಂಡರುಗಳಿಗೆ ನೀಡಿ ಆಹ್ವಾನ ನೀಡಿದರು



