
Read Time:1 Minute, 24 Second
ಉಡುಪಿ: ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಗದ್ದುಗೆ ಪ್ರತಿಷ್ಠೆಯ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆ ಭಾರತ ಟಿ -20 ತಂಡದ ಕ್ಯಾಪ್ಟನ್ ಆಗಮಿಸಿದರು.


ಈ ಹಿಂದೆಯೂ ಕ್ಷೇತ್ರಕ್ಕೆ ಬಂದು ದೇಗುಲಕ್ಕೆ ಕಂಬವನ್ನು ಸೇವಾ ರೂಪದಲ್ಲಿ ದಂಪತಿ ಕೊಟ್ಟಿದ್ದರು. ಸೂರ್ಯ ಕುಮಾರ್ ಯಾದವ್ ಪತ್ನಿ ಕರಾವಳಿ ಮೂಲದವರು. ನಿರ್ಮಾಣ ಹಂತದಲ್ಲಿದ್ದ ಕಾಪು ಮಾರಿಯಮ್ಮನ ಗುಡಿಯನ್ನು ಕಂಡು ಸೂರ್ಯ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದರು.
ಬ್ರಹ್ಮಕಲಶೋತ್ಸವದ ವೇಳೆ ದೇಗುಲಕ್ಕೆ ಬರುವುದಾಗಿ ಯಾದವ್ ಹೇಳಿದ್ದರು. ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿದ್ದರು. ಈ ಹಿಂದೆ ಕ್ಷೇತ್ರಕ್ಕೆ ಭೇಟಿ ಕೊಟ್ಟ ಬಳಿಕ ತಂಡದ ಕ್ಯಾಪ್ಟನ್ ಆಗಿ ಯಾದವ್ ನೇಮಕಗೊಂಡಿದ್ದರು. ಕಾಪು ಮಾರಿಯಮ್ಮನ ಕಾರ್ಣಿಕವನ್ನು ಯಾದವ್ ಹಾಡಿ ಹೊಗಳಿದ್ದರು.


ಬ್ರಹ್ಮಕಲಶೋತ್ಸವದ ವೇಳೆ ಭೇಟಿಕೊಟ್ಟು ದೇವಿ ದರ್ಶನ ಪಡೆದರು. ಸ್ವಾಗತ ಸಮಿತಿಯ ವತಿಯಿಂದ ಸೂರ್ಯ ಕುಮಾರ್ ಯಾದವ್ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
