
Read Time:55 Second
ಕಾರ್ಕಳ : ಕಾರ್ಕಳ ತಾಲೂಕು ಕುಲಾಲ ಮಹಿಳಾ ಮಂಡಳದ ಕಾರ್ಯದರ್ಶಿ, ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲನಿ ನಿವಾಸಿ ಸುರೇಖಾ ಮೂಲ್ಯ (40) ಅವರು ಅಲ್ಪಕಾಲದ ಅಸೌಖ್ಯದಿಂದ ಜು. 6ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಚೆಂಡೆ, ಭಜನೆ, ಸಂಗೀತ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಸುರೇಖಾ ಅವರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತಿ ಚಂದ್ರ ಮೂಲ್ಯ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ರಾತ್ರಿ 9 :30ವರೆಗೆ ಹುಡ್ಕೋ ಕಾಲನಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

