
Read Time:1 Minute, 3 Second
ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ಮತ್ತೆ ಮದುವೆಯಾಗಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಹೌದು ಸನ್ನಿ ಲಿಯೋನ್ ಮತ್ತೆ ಮದುವೆ ಆಗಿದ್ದಾರೆ. ಆದರೆ ಅವರು ಮತ್ತೆ ಮದುವೆಯಾಗಿರುವುದು ತಮ್ಮ ಪತಿಯ ಡೇನಿಯಲ್ ಅವರನ್ನೇ. ಇದೀಗ ತಮ್ಮ 3 ಮಕ್ಕಳ ಸಮ್ಮುಖದಲ್ಲೇ ಮಾಲ್ಡೀವ್ಸ್‌ನಲ್ಲಿ ಸನ್ನಿ ಲಿಯೋನ್ ಮರು ಮದುವೆ ಮಾಡಿಕೊಂಡಿದ್ದಾರೆ. 13 ವರ್ಷಗಳ ಹಿಂದೆ ಡೇನಿಯಲ್ ವೆಬರ್ ಅವರನ್ನು ಪ್ರೀತಿಸಿ ಸನ್ನಿ ಮದುವೆ ಆಗಿದ್ದರು. ಇದೀಗ ಅವರನ್ನು ಮತ್ತೆ ಮದುವೆ ಆಗಿದ್ದಾರೆ.
ಇನ್ನು ಕಳೆದೆರಡು ವರ್ಷಗಳಿಂದ ಡೇನಿಯಲ್ ಹಾಗೂ ಸನ್ನಿ ಲಿಯೋನ್ ಮರು ಮದುವೆ ಆಗುವ ಬಗ್ಗೆ ಯೋಚಿಸಿದ್ದರಂತೆ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾಗಲಿ ಎಂದು ಕಾಯುತ್ತಿದ್ದರು. ಇದೀಗ ಮಕ್ಕಳ ಎದುರು ಮತ್ತೆ ವಿವಾಹವಾಗಿದ್ದಾರೆ.

