
ಮಂಗಳೂರು: ಸುಗ್ಗಿ ಸೌಹಾರ್ದ ಸಹಕಾರಿ ನಿಯಮಿತ ಕಂಕನಾಡಿ ಇದರ 12 ನೇ ವಾರ್ಷಿಕ ಮಹಾ ಸಭೆಯು ಕಂಕನಾಡಿ ಸಿಟಿ ಚರ್ಚ್ ಸಭಾಂಗಣ ಎಂಪೋರೀಯಮ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.


ಸಭೆಯ ಅಧ್ಯಕ್ಷ ತೆ ಯನ್ನು ಲಯನ್ ಅನಿಲ್ ದಾಸ್ ಸುಗ್ಗಿ ಸೌಹಾರ್ದ ಸಹಕಾರಿಯ ಅಧ್ಯಕ್ಷರು ವಹಿಸಿದ್ದರು.

ಮುಖ್ಯ ಕಾರ್ಯನಿರ್ವ ನಿರ್ವಹಣಾಧಿಕಾರಿ ಶಿವ ಪ್ರಕಾಶ್. ಪ್ರಸಕ್ತ ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀ ಕಿರಣ್ ಅಟ್ಟಲೂರ್ ( ಉಪಾಧ್ಯಕ್ಷರು) ನಿರ್ದೇಶಕರುಗಳಾದ ಶ್ರೀ ದೇವರಾಜ್, ಶ್ರೀ ಮಹೇಶ್ ಕುಮಾರ್, ಶ್ರೀ ಪ್ರಸಾದ ತೊಮಸ್, ಶ್ರೀ ರಾಜೇಶ್, ಶ್ರೀ ಧೀರಜ್ ಜಯರಾಮ್, ಶ್ರೀ ರಮೇಶ್, ಶ್ರೀ ಸುನಿಲ್ ಕುಮಾರ್, ಶ್ರೀ ಜಯರಾಜ್ ಪ್ರಕಾಶ್, ಶ್ರೀಮತಿ ಆಶಾಲತಾ ದಾಸ್ ಉಪಸ್ಥಿತರಿದ್ದರು.


ಸಹಕಾರಿ ಬೆಳವಣಿಗೆ ಗೆ ಪೂರಕವಾದ ಹಲವಾರು ಯೋಜನೆ ಗಳನ್ನು ಮತ್ತು ಮುಂದಿನ ದಿನಗಳಲ್ಲಿ ಲಾಭದಾಯಕವಾಗಿ ನಡೆಯಲು ಅವಶ್ಯವಿರುವಂತಹ ಪ್ರಗತಿಯ ಬಗ್ಗೆ ಚಿಂತನೆಯನ್ನು ಮಾಡಲಾಯಿತು.

ವಿವಿಧ ಠೇವಣಿದಾರರನ್ನು ಅಭಿನಂದಿಸಲಾಯಿತು. ಕುಮಾರಿ ರಕ್ಷಿತಾ ಹಾಗೂ ಕುಮಾರಿ ಶ್ರದ್ಧಾ ಪ್ರಾರ್ಥನೆಯನ್ನು ಮಾಡಿದರು. ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಚೈತ್ರರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.