
Read Time:1 Minute, 9 Second
ನವದೆಹಲಿ: ಲೇಡಿ ಆಫ್ ಜಸ್ಟಿಸ್ ನ್ಯಾಯದೇವತೆ ಪ್ರತಿಮೆಯ ಮೇಲಿನ ಕಣ್ಣಿಗೆ ಪಟ್ಟಿಯನ್ನು ತೆಗೆದುಹಾಕಲಾಗಿದೆ. ಆಕೆಯ ಎಡಗೈಯಲ್ಲಿ ಕತ್ತಿಯ ಬದಲಾಗಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ.


ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಯ ಬದಲು ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಅನಾವರಣಗೊಳಿಸಲಾಗಿದೆ. ಈ ಹಿಂದಿನ ಪ್ರತಿಮೆಯ ಕೈಯಲ್ಲಿದ್ದ ಕತ್ತಿಯ ಬದಲಾಗಿ ಹೊಸ ನ್ಯಾಯದೇವತೆಯ ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ.
ಕಾನೂನು ಕುರುಡಲ್ಲ ಎಂಬ ಸಂದೇಶ ಸಾರುವ ಸಲುವಾಗಿ ಈ ಹೊಸ ಪ್ರತಿಮೆ ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಪ್ರತಿಮೆಯ ಅನಾವರಣ ಮಾಡಿದ್ದು, ಭಾರತೀಯ ನ್ಯಾಯದ ವಿಕಾಸದ ಸ್ವರೂಪವನ್ನು ಒತ್ತಿಹೇಳಿದ್ದಾರೆ.

