ಶಾಸಕ ಯಶ್ಪಾಲ್ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ – ಬಿಜೆಪಿ

0 0
Read Time:2 Minute, 8 Second

ಉಡುಪಿ: ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತೇವೆ ಎನ್ನುವ ಕಾಂಗ್ರೆಸ್ಸಿನ ಮಾತುಗಳೆಲ್ಲ ಕೇವಲ ಬೊಗಳೆಯಾಗಿದ್ದು ಮತೀಯವಾದಿಗಳ ಒತ್ತಡಕ್ಕೆ ಮಣಿದು ವಾಪಸ್ ಪಡೆದ ಸರ್ಕಾರ, ಅದನ್ನು ವಿರೋಧಿಸಿ ಪ್ರತಿಭಟಿಸಿದ ಶಿಕ್ಷಕರ ಮೇಲೆ ಕೇಸ್ ದಾಖಲಿಸಿ ಬೆದರಿಸುವ ತಂತ್ರ ಬಳಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ. ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಒಂದು ಪ್ರತಿಭಟನೆಯನ್ನೂ ಸಹಿಸಿಕೊಳ್ಳಲು ಆಗದ ನಿರಂಕುಶವಾದಿ ಮನಸ್ಥಿತಿ ಹೊಂದಿರುವುದು ಅವರು ಕುಳಿತ ಮುಖ್ಯಮಂತ್ರಿ ಸ್ಥಾನದ ಘನತೆಗೆ ಕುಂದು. ಪ್ರಾಂಶುಪಾಲರಿಗೆ ನೀಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮತೀಯವಾದಿಗಳ ಒತ್ತಡಕ್ಕೆ ಮಣಿದು ವಾಪಸ್ ಪಡೆದ ಸರ್ಕಾರ, ಅದನ್ನು ವಿರೋಧಿಸಿ ಪ್ರತಿಭಟಿಸಿದ ಶಿಕ್ಷಕರ ಮೇಲೆ ಕೇಸ್ ದಾಖಲಿಸಿ ಬೆದರಿಸುವ ತಂತ್ರ ಬಳಸುತ್ತಿದೆ.ಶಿಕ್ಷಕರ ಪರವಾಗಿ ಬೆಂಬಲಿಸಿ ಪ್ರತಿಭಟಿಸಿದ್ದ ಉಡುಪಿಯ ನಮ್ಮ ಶಾಸಕರಾದ ಯಶಪಾಲ್ ಸುವರ್ಣ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೂ ಎಫ್ಐಆರ್ ದಾಖಲಿಸಿ ದ್ವೇಷರಾಜಕಾರಣ ಮಾಡುತ್ತಿರುವುದು ಖಂಡನೀಯ. ಸರ್ಕಾರದ ನೀತಿಗಳನ್ನು ಟೀಕಿಸುವ ಜನಸಾಮಾನ್ಯರು ಹಾಗೂ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ಈ ರೀತಿ ಬೆದರಿಕೆ ಕೇಸ್ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕ್ರಮ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಈ ಕೂಡಲೇ ನಿಮ್ಮ ದ್ವೇಷರಾಜಕಾರಣವನ್ನು ನಿಲ್ಲಿಸಿ ಕೇಸ್ ಹಿಂಪಡೆಯದಿದ್ದಲ್ಲಿ ನಮ್ಮ ಹೋರಾಟವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *