
ಮಂಗಳೂರು: ಕುಲಾಲರಿಂದಲೂ ವಂಶಾಭಿವೃದ್ಧಿ ಸಾಧ್ಯ. ಕುಲ ಕಸುಬಿಗೆ ಒತ್ತು ನೀಡಬೇಕು . ಕುಲ ಕಸುಬನ್ನು ಬಿಟ್ಟರೆ ದೇವರಿಗೂ ಅದು ಇಷ್ಟವಾಗದು. ದೇವರ ಆಶೀರ್ವಾದದಿಂದ ಸಮಾಜಕ್ಕಾಗಿ ಇರುವ ಸಂಘ ಇನ್ನಷ್ಟು ಬೆಳಗಲಿ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಕಟೀಲು ಹೇಳಿದರು.



ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಜಿಲ್ಲಾ ಕಚೇರಿ ಉದ್ಘಾಟನೆ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ), ಮಂಗಳೂರು ಹಾಗೂ ಜಿಲ್ಲಾ ಸರಕಾರಿ ವೆಸ್ಲಾಕ್ ಆಸ್ಪತ್ರೆ, ಮಂಗಳೂರು ಅವರ ಸಹಯೋಗದಲ್ಲಿ ರಕ್ತದಾನ ಶಿಬಿರ ಭಾನುವಾರ ಕಂಕನಾಡಿ ಎಂಪೊರಿಯಂ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ಜರಗಿತು.
ಜಾತೀಯತೆ ದೇವರ ಪರ ಉಪಯೋಗವಾಗಿತ್ತು ಎಂಬ ನಂಬಿಕೆ ಪೂರ್ವಜರದ್ದಾಗಿತ್ತು. ಹಿಂದೂ ಧರ್ಮದ ಕೇಡಿಗೆ ಕಾರಣವಾಗುವ ಜಾತೀಯತೆಯಗಳು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿದೆ. ಪುರಿ ಜಗನ್ನಾಥಕ್ಷೇತ್ರದಲ್ಲಿಯೂ ಲಲಿತಕಲೆಗಳ ಬಳಕೆಯಲ್ಲಿ ಕುಲಾಲರ ಕಲಾತ್ಮಕತೆ ಹಾಗೂ ಚಿಂತನೆಗಳು ಸ್ಪಷ್ಟವಾಗಿ ಕಾಣುತ್ತವೆ ಎಂದರು.



ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಕುಂಬಾರರ ಮಹಾಸಭಾ (ರಿ) ಬೆಂಗಳೂರು ಹಾಗೂ ವೇದಿಕೆಯ ಸ್ಥಾಪಕ ಅಧ್ಯಕ್ಷರು ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಯಾವ ವ್ಯಕ್ತಿಯೂ ತಾನೇ ಮಾಡಿದ ಕೆಲಸವನ್ನು ಜಾಹಿರಾತು ಮಾಡಿಕೊಳ್ಳದೆ, ತಲಮಟ್ಟದಲ್ಲಿ ಸದ್ದು ಮಾಡದೆ ನಿಷ್ಠೆ, ತ್ಯಾಗ ಮತ್ತು ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತಾನೋ — ಪ್ರಶಸ್ತಿ, ಗೌರವ ಮತ್ತು ಮೆಚ್ಚುಗೆಗಳು ಅವನತ್ತ ಸ್ವಯಂ ಆಗಿ ಹರಿದು ಬರುತ್ತವೆ. ಕೆಲಸ ಮಾಡುವ ಮನೋಭಾವನೆ, ಶ್ರಮದ ಮೆಲುಕು ಮತ್ತು ಸತ್ಯನಿಷ್ಠೆ ಯಾವತ್ತೂ ಫಲ ನೀಡದೆ ಇರುವುದಿಲ್ಲ. ಒಮ್ಮೆ ನೆಟ್ಟ ಸಸಿ, ಇಂದಿಗೆ ದೊಡ್ಡ ಮರವಾಗಿ ಬೆಳೆಯುವಂತೆ — ಶ್ರದ್ಧೆ ಮತ್ತು ಸೇವಾಭಾವದಿಂದ ಮಾಡಿದ ಕೆಲಸವೂ ಕಾಲಕ್ರಮೇಣ ಫಲ ನೀಡುತ್ತದೆ ಎಂದರು.


ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಜಯರಾಜ್ ಪ್ರಕಾಶ್, ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷರು ಪ್ರೇಮಾನಂದ ಕುಲಾಲ್ ಕೋಡಿಕಲ್, ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಹಿರಿಯ ಮಾರ್ಗದರ್ಶಕಿ ಸಾವಿತ್ರಿ ಮಹಾಬಲ ಹಾಂಡ, ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸುಧಾಕರ ಸಾಲ್ಯಾನ್, ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಹಲವಾರು ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

15 ವರ್ಷಗಳ ಹಿಂದೆ ಪೇಜಾವರ ಶ್ರೀಗಳ ಆಶೀರ್ವಾದದೊಂದಿಗೆ ‘ದಾಸ್ ಚಾರಿಟಬಲ್ ಟ್ರಸ್ಟ್’ ಸ್ಥಾಪನೆಗೊಂಡಿತು. ಅಸ್ರಣ್ಣರ ಆಶೀರ್ವಾದದೊಂದಿಗೆ ಯಾವ ಕಾರ್ಯಕ್ರಮವನ್ನೇ ಪ್ರಾರಂಭಿಸಿದರೂ ಅದು ಯಶಸ್ವಿಯಾಗಿ ಸಾಗುವುದು ನಿಶ್ಚಿತ. ಆಧುನೀಕರಣದ ದಾರಿಯಲ್ಲಿ ಸಾಗುತ್ತಿರುವ ಈ ಟ್ರಸ್ಟ್ ಪ್ರತಿ ತಾಲೂಕು ಮಟ್ಟದಲ್ಲಿಯೂ ಉತ್ತಮ ಸೇವೆಯನ್ನು ನೀಡುತ್ತಿದೆ. ಕುಲಾಲ ಕುಂಬಾರ ವೇದಿಕೆಯ ಮೂಲಕ ಅಶಕ್ತರಿಗೆ ಸಹಾಯ ಹಸ್ತ ಚಾಚುವುದು ಇದರ ಪ್ರಮುಖ ಧ್ಯೇಯವಾಗಿದೆ.


ಅನಿಲ್ ದಾಸ್ ಜಿಲ್ಲಾ ಅಧ್ಯಕ್ಷ ಕುಲಾಲ ಕುಂಬಾರ ಯುವ ವೇದಿಕೆ ನಡೆದು ಬಂದ ದಾರಿ ಮತ್ತು ಮುಂದಿನ ದೈಯೋದ್ದೇಶಗಳನ್ನು ಸವಿ ವಿವರವಾಗಿ ವಿವರಿಸಿದರು. ಮುಂದಿನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧಾ ಕಾರ್ಯಕ್ರಮವು ನಗರದ ಪುರ ಭವನದಲ್ಲಿ ಮುಂಬರುವ ಜನವರಿ ನಾಲ್ಕು ತಾರೀಕಿಗೆ ನಡೆಲಿದೆ ಎಂಬುದನ್ನು ಈ ಸಂದರ್ಭದಲ್ಲಿ ವಿವರಿಸಿದರು. ಕಾರ್ಯಕ್ರಮದಲ್ಲಿ ವಿ ಕೆ. ಫರ್ನಿಚರ್ ಮಾಲಕ ರಾದ ಶ್ರೀ ವಿಠ್ಠಲ್ ಕುಲಾಲ್.ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಶ್ರೀ ಕಿರಣ್ ಅಟ್ಟಲೂರ್. ಬಂಟುವಾಳ ಯುವ ವೇದಿಕೆ ಸಂಚಾಲಕರಾದ. ಶ್ರೀ ರಾಧಾಕೃಷ್ಣ. ಶ್ರೀ ಲಕ್ಷ್ಮಣ ಅಗರಿಬೈಲ್. ಶ್ರೀ ಜಯೇಶ್ ಗೋವಿಂದ್. ಶ್ರೀ ಗಂಗಾಧರ್ ಬಂಜನ್. ಶ್ರೀ ಭಾಸ್ಕರ್ ಕುತ್ತಾರ್ ಉಪಸ್ಥಿತರಿದ್ದರು . ಶ್ರೀ ಎಚ್. ಕೆ. ನಯನಾಡ್. ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಜಯಂತ್ ಉಚಿಲ್ ಧನ್ಯವಾದವನ್ನು ಸಮರ್ಪಿಸಿದರು. ಸಮಾಜದ ಹಲವು ಗಣ್ಯರು. ಉಪಸಿತರಿದ್ದರು.. ಸಮಾಜದ ಹಲವಾರು ಪ್ರಮುಖರು ರಕ್ತದಾನ ಮಾಡುವ ಮೂಲಕ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡರು..