
Read Time:1 Minute, 16 Second
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿತ್ತಿದ್ದಂತ ವೇಳೆಯಲ್ಲೇ ವೇದಿಕೆಯ ಕಡೆಗೆ ವ್ಯಕ್ತಿಯೊಬ್ಬ ಮಚ್ಚು ಹಿಡಿದು ನುಗ್ಗಿ, ಆತಂಕ ಸೃಷ್ಠಿಸಿದಂತ ಘಟನೆ ನಡೆದಿದೆ.


ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀರಾಮ ಸೇನೆಯಿಂದ ಹಮ್ಮಿಕೊಂಡಿದ್ದಂತ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಗಿಯಾಗಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಯತ್ನಾಶ್ ಮಾತನಾಡೋದಕ್ಕೆ ಪ್ರಾರಂಭಿಸಿದ ಬಳಿಕ, ವೇದಿಕೆಯ ಹಿಂಭಾಗದಿಂದ ದಿಢೀರ್ ಮಚ್ಚು ಹಿಡಿದು ವ್ಯಕ್ತಿಯೊಬ್ಬ ನುಗ್ಗಿದ್ದಾನೆ.
ವೇದಿಕೆಯ ಮೇಲೆ ದಿಢೀರ್ ಹಿಂದಿನಿಂದ ಮಚ್ಚು ಹಿಡಿದು ನುಗ್ಗಿ ಬಂದಂತ ವ್ಯಕ್ತಿಯನ್ನು ಗಮನಿಸಿದಂತ ಕಾರ್ಯಕರ್ತರು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಿಢೀರ್ ನಡೆದಂತ ಈ ಘಟನೆಯಿಂದ ಕೆಲ ಕಾಲ ಆಂತಕಕ್ಕೂ ಕಾರಣವಾಗಿತ್ತು. ಶಾಸಕ ಯತ್ನಾಳ್ ಕೂಡ ಗಲಿಬಿಲಿಗೊಂಡಿದ್ದರು.


