
Read Time:52 Second
ಬೆಂಗಳೂರು : ಇನ್ಮುಂದೆ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದರು. ಕನಿಷ್ಠ 30 ಅಂಕ ಪಡೆಯುವುದು ಕಡ್ಡಾಯವಾಗಿದೆ ಲಿಖಿತ ಹಾಗೂ ಆಂತರಿಕ ಅಂಕ ಸೇರಿದಂತೆ 30 ಅಂಕ ಪಡೆದು 198 ಅಂಕ ಪಡೆದರೆ ಪಾಸ್ ಆಗಲಿದ್ದಾರೆ.


2025 ಮತ್ತು 26ನೇ ಸಾಲಿನಿಂದ ಪರೀಕ್ಷಾ ಪಾಸಿಂಗ್ ಅಂಕ ಕಡಿತ ಅಗಲಿದ್ದು, ಅದೇ ರೀತಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ. ಕೂಡ 625ಕ್ಕೆ ಕನಿಷ್ಠ 26 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಪಾಸ್ ಆದಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.