
Read Time:1 Minute, 12 Second
ಮಂಗಳೂರು: ಶ್ರೀ ದೇವಿ ದೇವಸ್ಥಾನ ಪೋಲಿಸ್ ಲೈನ್ ಮಂಗಳೂರು ಇಲ್ಲಿ ಜನವರಿ 4 ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೆ ಭಕ್ತಿನಾಮ ಸಂಕೀರ್ತನೆ ಹಾಗೂ ಸಂಜೆ 6:30 ರಿಂದ ಸಾಮೂಹಿಕ ಶ್ರೀ ಶನಿಪೊಜೆ ನಡೆಯಲಿದೆ.


ಈ ಕಾರ್ಯಕ್ರಮಕ್ಕೆ ಸಹಾಯಕ ಪೊಲೀಸ್ ಆಯುಕ್ತರಾದ ಎಮ್.ಎಸ್.ಉಪಾಸೆ, ಬಜಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿಯಾದ ಪಕೀರ ಮೂಲ್ಯ ವೈ, ಅಸಿಸ್ಟೆಂಟ್ ಮ್ಯಾನೇಜರ್ ಎಮ್.ಸಿ.ಎಫ್. ಸಂದೀಪ್ ಅತ್ತಾವರ, ಶೈಲೇಶ್, ನಂದೀಶ ಎಸ್. ಪಾಂಡೇಶ್ವರ, ಸುಬ್ರಹ್ಮಣ್ಯ ಮುಂತಾದ ಗಣ್ಯ ಅಥಿತಿಗಳು ಪಾಲ್ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಬೇಕಾಗಿ ಸದಾಶಿವ ಎ ಕುಲಾಲ್ ಅಧ್ಯಕ್ಷರು , ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಕೋಶಧಿಕಾರಿ, ಪ್ರಕಾಶ್ ಎಸ್ ಕಾರ್ಯದರ್ಶಿ ಹಾಗೂ ಶ್ರೀದೇವಿ ಸೇವಾ ಸಮಿತಿ ಮತ್ತು ಮಾತೃ ಮಂಡಳಿಯವರು ವಿನಂತಿಸಿರುತ್ತಾರೆ.

