
ಉಳ್ಳಾಲ : ಹಿಂದೆ ಭಜನೆ ಮತ್ತು ಯಕ್ಷಗಾನವನ್ನು ತಾತ್ಸಾರವಾಗಿ ನೋಡುತಿದ್ದು, ಇಂದು ಶಿಕ್ಷಣ, ಪದವಿ ಪಡೆದವರೇ ಈ ಕ್ಷೇತ್ರದತ್ತ ಆಕರ್ಷಿಸುತ್ತದ್ದಾರೆ, ಭಜನೆ ಎನ್ನುವುದು ಧರ್ಮ ಶಿಕ್ಷಣದ ಪಟ್ಯ, ಅಸ್ಪೃಶ್ಯತೆಯ ಘಾಟು ಇದರಲಿಲ್ಲ, ಇಹ ಪರದ ಸೇರುವಿಕೆಯಾಗಿರುವ ಭಜನೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದು, ಹತ್ತು ಮಂದಿಗೆ ಜಾಗೃತಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧೆ ಅಗತ್ಯ ಎಂದು ಶ್ರೀ ಕ್ಷೇತ್ರ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಪ.ಪೂ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ನುಡಿದರು.


ಅವರು ದ.ಕ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಗಟ್ಟಿ ಸಮಾಜ ಭವನದಲ್ಲಿ ಆಯೋಜಿಸಿ ತ್ರಿವಳಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ (ದ.ಕ, ಉಡುಪಿ, ಕಾಸರಗೋಡ್) ಸುಗಿತ್ ನಲಿಪುಗ 2024 ಕಾರ್ಯಕ್ರಮದ ದೀಪಬೆಳಗಿಸಿ ಆಶೀರ್ವಚನ ನೀಡಿದರು.

ಈ ವೇಳೆ ಸಾಯಿ ಪರಿವಾರ್ ಟ್ರಸ್ಟ್ ನ ಮಹಾಪೋಷಕರಾದ ಪ್ರವೀಣ್ ಶೆಟ್ಟಿ ಪಿಲಾರು ಮೇಗಿಮನೆಯವರಿ ಸಾಯಿ ಪರಿವಾರ್ ಗೌರವ ಸನ್ಮಾನಿಸಲಾಯಿತು.
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರದಾನ ಅರ್ಚಕರಾದ ಮಂಜಪ್ಪ ಕಾರ್ನವರ್, ಸಾಯಿ ಪರಿವಾರ್ ಟ್ರಸ್ಟ್ ನ ಮಹಾ ಪೋಷಕರಾದ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ, ಉಳ್ಳಾಲ ಭಗವತೀ ಕ್ಷೇತ್ರದ ಮೊಕ್ತೇಸರರಾದ ಸುರೇಶ್ ಭಟ್ನಗರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ವಕೀಲರಾದ ಗಂಗಾದರ ಉಳ್ಳಾಲ್, ಕೈರಂಗಳ ಶಾರದಾ ವಿಧ್ಯಾಗಣಪತಿ ಸಂಸ್ಥೆಯ ಸಂಚಾಲಕ ರಾಜಾರಾಮ ಭಟ್, ಉಳ್ಳಾಲ ಆರಕ್ಷಕ ಠಾಣಾಧಿಕಾರಿ ಬಾಲಕೃಷ್ಣ, ಕಲ್ಲಾಪು ಕೊರಗಜ್ಜ ಮಧ್ಯಸ್ಥರಾದ ದೇವದಾಸ್ ಗಟ್ಟಿ, ಹಿಂದೂ ಯುವ ಸೇನಾ ಅಧ್ಯಕ್ಷ ಯಶೋದರ ಚೌಟ, ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಜಗದೀಶ್ ಆಳ್ವ, ವಿಧ್ಯಾರತ್ನ ವಿಧ್ಯಾಸಂಸ್ಥೆಯ ರವೀಂದ್ರ ಉಳಿದೊಟ್ಟು, ಕದ್ರಿ ಕ್ರಿಕೆಟರ್ಸ್ ನ ಜಗದೀಶ್ ಕದ್ರಿ, ದುರ್ಗಾವಾಹಿನಿ ಮಹಿಳಾ ಮಂಡಳಿಯ ಸುನೀತ ಗಟ್ಡಿ ಕುತ್ತಾರ್, ಧನಲಕ್ಷ್ಮಿ ಗಟ್ಟಿ, ಧಾರ್ಮಿಕ ಮುಖಂಡ ಕೃಷ್ಣ ಶಿವಕೃಪಾ ಕುಂಜತ್ತೂರು, ಇನ್ನಿತರ ವಿವಿದ ಕ್ಷೇತ್ರದ ಪ್ರಮುಖರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ನಾಗರಾಜ ಆಚಾರ್ಯ ಮಂಗಳಾದೇವಿ, ಭಗವಾನ್ ದಾಸ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಆನಂದ ಶೆಟ್ಟಿ ತೊಕ್ಕೊಟ್ಟು, ಗೋಪಾಲಕೃಷ್ಣ ಮೇಲಾಂಟ, ಸಪ್ನಾ ಶೆಟ್ಟಿ, ಯಶವಂತ ಅಮೀನ್ ಉಳ್ಳಾಲ, ದೀಕ್ಷಿತ್ ನಿಸರ್ಗ, ಪ್ರವೀಣ್ ಬಸ್ತಿ, ಪ್ರವೀಣ್ ರೈ ಕೆರೆಬೈಲ್ ಗುಡ್ಡೆ, ರಾಜೇಶ್ ಕೊಲ್ಯ, ಗಜೇಂದ್ರ ಮಡಿಲು, ಸಾಯಿ ಪರಿವಾರ್ ಟ್ರಸ್ಟ ಸ್ಥಾಪಕ ಪುರುಷೋತ್ತಮ ಕಲ್ಲಾಪು, ಅಧ್ಯಕ್ಷ ಗಣೇಶ್ ಅಂಚನ್, ಉಪಸ್ಥಿತರಿದ್ದರು.


ಸಾಯಿ ಪರಿವಾರ್ ಟ್ರಸ್ಟ್ ನ ಗೌರವ ಸದಸ್ಯ ಡಾ.ಅರುಣ್ ಉಳ್ಳಾಲ್ ಸ್ವಾಗತಿಸಿದರು.ಟ್ರಸ್ಟ್ ನ ಸ್ಥಾಪಕರಾದ ಪ್ರವೀಣ್ ಎಸ್.ಕುಂಪಲ ಅವರು ಕಾರ್ಯಕ್ರಮ ನಿರೂಪಿಸಿದರು, ಕೃಷ್ಣ ಪೊನ್ನತ್ತೋಡು ವಂದಿಸಿದರು.
