ಮಂಗಳೂರು: ಪ್ರಾಣಿಗಳ ಮೇಲೆ ಕಾಳಜಿಯಿರುವ ಸ್ಪೀಕರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ- ಹರೀಶ್ ಪೂಂಜಾ ಟಾಂಗ್!

1 0
Read Time:2 Minute, 33 Second

ಮಂಗಳೂರು: ಕಾಂಗ್ರೆಸ್ ಸರಕಾರ ಗೋಹತ್ಯೆ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ. ಆನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆನೆಗಳಿಗೆ ಕೊಲ್ಲಲು ಅವಕಾಶ ಕೊಡಬೇಕೆಂದು ಸದನದಲ್ಲಿ ಮಾತನಾಡಿದ್ದೆ.

ಆದರೆ ಸ್ಪೀಕರ್ ಯು.ಟಿ.ಖಾದರ್ ಮನುಷ್ಯರಿಗೆ ಮಾತ್ರವಲ್ಲ ಆನೆಗಳಿಗೂ ಬದುಕುವ ಹಕ್ಕಿದೆ ಎಂದಿದ್ದರು. ಹಾಗಾದ್ರೆ ಗೋವುಗಳಿಗೆ ಬದುಕುವ ಹಕ್ಕು ಇದೆಯಲ್ವಾ..? ದಯವಿಟ್ಟು, ಅವರು ಗೋಹತ್ಯೆ ನಿಲ್ಲಿ‌ಸಬೇಕೆಂದು ಹೇಳಿಕೆ‌ ಕೊಡಲಿ, ಬಿಜೆಪಿಯಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಸರಕಾರ ಅದನ್ನು ವಾಪಾಸು ಪಡೆದಿದೆ.

ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದಲ್ಲಿ ಖಾದರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು. ಮೃತ್ಯುಂಜಯ ನದಿಗೆ ದನದ ಮಾಂಸ ಎಸೆಯುವ ಮೂಲಕ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ‌. ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಎಚ್‌ಪಿ – ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟಿದೆ.

ಈ ರೀತಿಯ ಘಟನೆ ನಡೆದಾಗ ಪ್ರತಿಭಟನೆ ನಡೆಸುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಯಾಕೆಂದರೆ ಗೋಕಳ್ಳ ಸಾಗಾಣೆ ನಡೆದಾಗ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆದರೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಗೋರಕ್ಷಕರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ದ.ಕ.ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಕಳ್ಳ ಸಾಗಾಣೆ, ಗೋಹತ್ಯೆ ನಡೆಯುತ್ತಿದೆ.

ಮೃತ್ಯುಂಜಯ ನದಿಗೆ ಗೋಮಾಂಸ ಎಸೆದ ಆರೋಪಿಗಳನ್ನು ವಾರದೊಳಗೆ ಬಂಧಿಸುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿತ್ತು. ಆದರೆ ಈವರೆಗೆ ಆರೋಪಿಗಳ ಸುಳಿವು ದೊರಕದ ಕಾರಣ ವಿಎಚ್‌ಪಿ – ಬಜರಂಗದಳ ಕಕ್ಕಿಂಜೆ ಚಲೋ ಹೋರಾಟ ಕೈಗೆತ್ತಿಕೊಂಡಿದೆ. ಅದಕ್ಕೆ ಇಡೀ ಸಮಾಜ ಹಾಗೂ ನಾವೆಲ್ಲರೂ ಬೆಂಬಲ ಸೂಚಿಸುತ್ತೇವೆ ಎಂದು ಹರೀಶ್ ಪೂಂಜಾ ಹೇಳಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *