
Read Time:1 Minute, 8 Second
ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಹೆಸರಿನಲ್ಲಿ ಇನ್ಸಾಗ್ರಾಮ್ ಪೇಜ್ ಅನಧಿಕೃತವಾಗಿ ದೇವಾಲಯದ ಮಾಹಿತಿ ಪ್ರಕಟಿಸಿ ಭಕ್ತಾದಿಗಳಿಂದ ಸೇವಾ ಶುಲ್ಕ ವಸೂಲ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.


ಈ ಕುರಿತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಡುವ ದೇವಸ್ಥಾನದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅನಧಿಕೃತವಾಗಿ ಬಳಸಿಕೊಂಡು ಭಕ್ತಾದಿಗಳನ್ನು ದಾರಿ ತಪ್ಪಿಸಿ ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಭಕ್ತರು ದೇವಸ್ಥಾನದ ಸೇವೆಗಾಗಿ ಆನ್‌ಲೈನ್ ಮೂಲಕ ₹150 ಪಾವತಿಸಬೇಕೆಂದು ತಿಳಿಸಿ ಮೋಸ ಮಾಡಲಾಗುತ್ತಿತ್ತು.