
ಬೆಂಗಳೂರು: ಒಂದು ಪೂರ್ವನಿಯೋಜಿತ cold-blooded ಕೋಮು ಗಲಭೆಯನ್ನ ‘ಆಕಸ್ಮಿಕ’ ಎನ್ನುತ್ತೀರಲ್ಲ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಆಕಸ್ಮಿಕವಾಗಿ ಕಲ್ಲು ತೂರಿದ್ದಾರೆ ಎಂದ ಗೃಹ ಸಚಿವ ಹೇಳಿಕೆಯನ್ನ ತಮ್ಮ X ಖಾತೆಯಲ್ಲಿ ಖಂಡಿಸಿದ್ದಾರೆ.


ನಿಮ್ಮ ಸರ್ಕಾರಕ್ಕೆ ಮುಸ್ಲಿಂ ಮತಾಂಧರ ಮೇಲೆ ಯಾಕಿಷ್ಟು ವ್ಯಾಮೋಹ ಎಂದು ಪ್ರಶ್ನಿಸಿದ್ದಾರೆ.
ಮತಾಂಧರು ಆಕಸ್ಮಿಕವಾಗಿ ಕಲ್ಲು ಎಸೆದರಾ?


ಮತಾಂಧರು ಆಕಸ್ಮಿಕವಾಗಿ ಚಪ್ಪಲಿ ಎಸೆದಾರಾ?

ಮತಾಂಧರು ಆಕಸ್ಮಿಕವಾಗಿ ವಾಹನಗಳಿಗೆ ಬೆಂಕಿ ಹಚ್ಚಿದರಾ?
ಮತಾಂಧರು ಆಕಸ್ಮಿಕವಾಗಿ ಹಿಂದೂಗಳ ಮೇಲೆ ಹಲ್ಲೆ ಮಾಡಿದರಾ?
ಹಿಂದೂಗಳು ಯಾವುದೋ ಕೆಟ್ಟ ಘಳಿಗೆಯಲ್ಲಿ ಆಕಸ್ಮಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಆಕಸ್ಮಿಕವಾಗಿ ಈ ಲಜ್ಜೆಗೆಟ್ಟ ಸರ್ಕಾರವನ್ನು ಅಧಿಕಾರಕ್ಕೆ ತಂದು ಬಿಟ್ಟಿದ್ದಾರೆ. ಗಣೇಶನ ವಿಸರ್ಜನೆಗೆ ಅಡ್ಡಿಪಡಿಸಿದ ಈ ಹಿಂದೂ ವಿರೋಧಿ ಸರ್ಕಾರವನ್ನ ಕನ್ನಡಿಗರು ಶಾಶ್ವತವಾಗಿ ವಿಸರ್ಜನೆ ಮಾಡುವ ದಿನ ದೂರವಿಲ್ಲ. ನೋಡುತ್ತಿರಿ ಎಂದು ಎಚ್ಚರಿಸಿದ್ದಾರೆ.