ಹಾಸನದಲ್ಲಿ ಬೆಚ್ಚಿಬೀಳಿಸಿದ ಗುಂಡಿನ ದಾಳಿ – ಇಬ್ಬರ ಸಾವು

0 0
Read Time:3 Minute, 11 Second

ಹಾಸನ: ಇಲ್ಲಿನ ಹೊಯ್ಸಳ‌ನಗರ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಶೂಟೌಟ್ ಪ್ರಕರಣ ನಡೆದಿದ್ದು, ಇದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಆಸೀಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ (52) ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ಮೃತ ಶರಾಪತ್ ಮೂಲತಃ ದೆಹಲಿಯವರಾಗಿದ್ದು, ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದರು. ಇವರಿಬ್ಬರೂ ಮಧ್ಯಾಹ್ನ 12ರ ಸಮಯದಲ್ಲಿ ಕಾರಿನಲ್ಲಿ ಹೊಯ್ಸಳ ನಗರಕ್ಕೆ ಬಂದಿದ್ದರು. ಶೂಟೌಟ್‌ಗೆ ರಿಯಲ್‌ ಎಸ್ಟೇಟ್‌ ವಿಷಯವೇ ಕಾರಣ ಎಂದೆನ್ನಲಾಗಿದೆ. ಗುಂಡಿನ ದಾಳಿಯ ಬಗ್ಗೆ ಇನ್ನೂ ಸ್ಪಷ್ಟತೆ ದೊರೆಯಬೇಕಿದೆ.

ಹೊಯ್ಸಳ ನಗರದ ಮುಖ್ಯ ರಸ್ತೆಯಲ್ಲಿಯೇ ನಿಸ್ಸಾನ್ ಟರಾನೋ ಕಾರು ನಿಂತಿದ್ದು, ಅದರ ಎದುರಿನಲ್ಲಿ ಇಬ್ಬರ ಶವಗಳು ಬಿದ್ದಿವೆ. ಕೊಲೆಯಾದವರ ಗುರುತು ಪತ್ತೆಯಾಗಿಲ್ಲ.

ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಾಕ್ಷಿ ಕಲೆ ಹಾಕುತ್ತಿದ್ದಾರೆ.

‘ಕಾರಿನಲ್ಲಿ ಇಬ್ಬರೇ ಬಂದಿದ್ದು, ಒಬ್ಬರು ಇನ್ನೊಬ್ಬರಿಗೆ ಗುಂಡು ಹಾರಿಸಿ ನಂತರ ತಾವೂ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಾಹ್ನದ ವೇಳೆಗೆ ಕಾರಿನಲ್ಲಿ ನಿವೇಶನ ನೋಡಲು ಇಬ್ಬರು ಬಂದಿದ್ದರು. ಇಬ್ಬರೂ ಮಾತನಾಡಿಕೊಂಡು ಕಾರಿನತ್ತ ಬಂದಿದ್ದಾರೆ. ನಂತರ ಗುಂಡಿನ ಶಬ್ದ ಕೇಳಿ ಬಂದಿದೆ. ಅಕ್ಕಪಕ್ಕದವರು ಹೊರಗೆ ಬಂದು ನೋಡಿದಾಗ, ಒಂದು ಶವ ಹೊರಗಡೆ ಬಿದ್ದಿತ್ತು. ಇನ್ನೊಂದು ಶವ ಕಾರಿನಲ್ಲಿತ್ತು’ ಎಂದು ವಿವರಿಸಿದರು.

ನಿವೇಶನ ವಿಚಾರದಲ್ಲಿ ಜಗಳ ಆಗಿರಬಹುದು. ಶರಾಫತ್ ಆಲಿಗೆ ಗುಂಡು ಹೊಡೆದು ಕೊಲೆ ಮಾಡಿದ ಆಸೀಫ್, ಕಾರಿನಲ್ಲಿ ಕುಳಿತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ, ಈ ಬಗ್ಗೆ ತನಿಖೆ ಮಾಡುತ್ತಿದ್ದು, ನಂತರವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ಹೇಳಿದರು.

‘ಕಾರಿನಲ್ಲಿ ಪಿಸ್ತೂಲ್‌ ಸಿಕ್ಕಿದೆ. ಕಾರು ಮೈಸೂರು ನೋಂದಣಿ ಹೊಂದಿದ್ದು, ಅದನ್ನು ಮಾರಾಟ ಮಾಡಲಾಗಿದೆಯೇ? ಇಬ್ಬರೂ ಎಲ್ಲಿಯವರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದಿದ್ದು, ಅವರು ಪರಿಶೀಲನೆ ನಡೆಸಿದ ನಂತರವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *