ಹಸೆಮಣೆ ಏರಬೇಕಿದ್ದವಳು ಮಸಣಕ್ಕೆ : 2 ಬೈಕ್ ಗಳ ಮಧ್ಯ ಭೀಕರ ಅಪಘಾತ

0 0
Read Time:2 Minute, 24 Second

ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ನರೇಗಾ ಎಂಜಿನಿಯರ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸಾಪುರ ಗೇಟ್ ಬಳಿ ನಡೆದಿದೆ.ಮೃತಳನ್ನು ಮೂಲತಃ ಹಲಗೂರು ಸಮೀಪದ ಬಳೆಹೊನ್ನಿಗ ಗ್ರಾಮದ ನರೇಗಾ ಎಂಜಿನಿಯರ್ ಆಗಿದ್ದ ಶರಣ್ಯ ಗೌಡ (25) ಎಂದು ಗುರುತಿಸಲಾಗಿದೆ.

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದವಳಾದ ಶರಣ್ಯಾ ಗೌಡ, ಕಳೆದ ಒಂದು ವರ್ಷದಿಂದ ಕನಕಪುರ ವಿಭಾಗದಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.ಕನಕಪುರ ತಾಲೂಕಿನ ಸಾತನೂರು ಪಂಚಾಯಿತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ಮಾಡುತ್ತಿದ್ದ ಶರಣ್ಯಾ ಗೌಡ, ನಿನ್ನೆ ತನ್ನ ಕೆಲಸವನ್ನು ಮುಗಿಸಿ ವಾಪಸ್ ಹಲಗೂರಿನ ಬಳಿಯ ಸ್ವಗ್ರಾಮಕ್ಕೆ ಹೋುವಾಗ ಎರಡು ಬೈಕ್‌ಗಳ ನಡುವ ಮುಖಾಮುಖಿ ಡಿಕ್ಕಿಯಾಗಿವೆ.

ಈ ವೇಳೆ ಬೈಕ್‌ನಿಂದ ಬಿದ್ದ ಶರಣ್ಯಾ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದ ತಲೆ ಬಿದ್ದು ಗಂಭೀರ ಪೆಟ್ಟಿನಿಂದಾಗ ತೀವ್ರ ರಕ್ತಸ್ತಾವ ಉಂಟಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಯಾವುದೇ ವಾಹನಗಳು ಸರಿಯಾದ ಸಮಯಕ್ಕೆ ಲಭ್ಯವಾಗಲಿಲ್ಲ. ಹೀಗಾಗಿ, ಕೆಲವೇ ಕ್ಷಣಗಳಲ್ಲಿ ಶರಣ್ಯಾ ಗೌಡ ಸ್ಥಳದಲ್ಲಿಯೇ ಅಸುನೀಗಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಇಂಜಿನಿಯರ್ ಶರಣ್ಯಾಗೆ ಮುಂದಿನ ತಿಂಗಳು ಫೆ.16ರಂದು ಮದುವೆ ಕೂಡ ನಿಶ್ಚಯವಾಗಿತ್ತು. ಈಗಾಗಲೇ ಎಂಗೇಜ್‌ಮೆಂಟ್ ಕೂಡ ಆಗಿದ್ದು, ಮದುವೆ ತಯಾರಿ ಮಾಡಿಕೊಳ್ಳುವುದಕ್ಕಾಗಿ ಪ್ರತಿ ವಾರಾಂತ್ಯದಲ್ಲಿ ತಪ್ಪದೇ ಮನೆಗೆ ಹೋಗುತ್ತಿದ್ದರು. ಮದುವೆ ಆಮಂತ್ರಣ ಪತ್ರಿಕೆಗಳನ್ನು ಕೂಡ ಪ್ರಿಂಟ್ ಮಾಡಿಸಿ ಹಂಚಿಕೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮಗಳನ್ನು ಕಳೆದುಕೊಂಡ ಇದೀಗ ಪೋಷಕರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *