
Read Time:1 Minute, 19 Second
ಶಬರಿಮಲೆ ಯಾತ್ರಾರ್ಥಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಸುಲಭ ದರ್ಶನಕ್ಕೆ ಅನುಕೂಲವಾಗುವಂತೆ ವಿಶೇಷ ಪೋರ್ಟಲ್ ಪರಿಚಯಿಸಲಾಗಿದೆ.


ಹೌದು, ಕೇರಳ ಸರ್ಕಾರ ಶಬರಿಮಲೆ – ಪೊಲೀಸ್ ಮಾರ್ಗದರ್ಶಿ ಎಂಬ ಈ ಪೋರ್ಟಲ್ ಪರಿಚಯಿಸಿದ್ದು, ಇದು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಭಕ್ತರಿಗೆ ಉಪಯುಕ್ತವಾದ ಎಲ್ಲಾ ಪ್ರಮುಖ ಮಾಹಿತಿ ನೀಡಲಾಗಿದ್ದು, ಇನ್ಮುಂದೆ ಭಕ್ತರು ಸುಲಭವಾಗಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದುಕೊಳ್ಳಬಹುದು.
ಪೊಲೀಸ್ ಸಹಾಯವಾಣಿ ಸಂಖ್ಯೆಗಳು, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳು, ಆರೋಗ್ಯ ಸೇವೆಗಳು, ಕೆಎಸ್ಆರ್ಟಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ಠಾಣೆ ಸೇವೆಗಳು ಮತ್ತು ಆಹಾರ ಸುರಕ್ಷತಾ ಮಾಹಿತಿಗಳು ಈ ಪೋರ್ಟಲ್ನಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ಶಬರಿಮಲೆಯ ಇತಿಹಾಸ, ವಾಹನಗಳ ನಿಲುಗಡೆ ಮತ್ತು ಪ್ರತಿ ಜಿಲ್ಲೆಯಿಂದ ಶಬರಿಮಲೆಗೆ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

