
ವಿಟ್ಲ: ಶ್ರೀ ಎಲೆಕ್ಟ್ರೋನಿಕ್ಸ್ ಶಾಪ್ಗೆ ಭಾರೀ ಬೆಂಕಿ ತಗಲಿದ ಪರಿಣಾಮ ಹಲವು ಅಂಗಡಿಗಳು ಭಸ್ಮವಾಗಿದ್ದು, ಬಿಸಿರೋಡ್ ನಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.



ವಿಟ್ಲ ಪಟ್ಟಣದ ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟ್ರೋನಿಕ್ಸ್ ಅಂಗಡಿಗೆ ಇಂದು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಸಿರೋಡ್ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಹರ ಸಾಹಸ ಪಡುತ್ತಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ವಿಟ್ಲ–ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವಿಟ್ಲ ಪೊಲೀಸರು ಸ್ಥಳದಲ್ಲಿದ್ದು, ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.ಬೆಂಕಿ ಅವಘಡದಲ್ಲಿ ಶ್ರೀ ಎಲೆಕ್ಟ್ರೋನಿಕ್ಸ್ ಅಂಗಡಿ ಸೇರಿದಂತೆ ಪಕ್ಕದಲ್ಲಿರುವ ಟೈಲರ್ ಶಾಪ್, ಫಾಸ್ಟ್ ಫುಡ್ ಹೊಟೇಲ್ ಹಾಗೂ ಫೈವ್ ಸ್ಟಾರ್ ವೈನ್ಸ್ ಅಂಗಡಿಗಳು ಸಂಪೂರ್ಣವಾಗಿ ಭಸ್ಮಗೊಂಡಿವೆ. ಅಲ್ಲದೆ ಅಮಿತ್ ಹೊಟೇಲ್ಗೂ ಬೆಂಕಿ ಪಸರಿಸಿದ್ದು, ಸಮೀಪದ ಗಣೇಶ್ ಡ್ರೈವಿಂಗ್ ಸ್ಕೂಲ್ ಕಟ್ಟಡದಿಂದಲೂ ಹೊಗೆ ಕಾಣಿಸಿಕೊಂಡಿದೆ.ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದ್ದು, ನಷ್ಟದ ಪ್ರಮಾಣ ಹಾಗೂ ನಿಖರ ಕಾರಣ ಕುರಿತು ಇನ್ನು ತಿಳಿಯ ಬೇಕಿದೆ.



