
ಮಂಗಳೂರು: ಸ್ಕೌಟ್ಸ್ ಗೈಡ್ಸ್ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಮೂಡಿ ಬರಲು ಸಾಧ್ಯ. ಮಕ್ಕಳು ಎಳವೆಯಲ್ಲೇ ಉತ್ತಮ ಸಂಸ್ಕಾರಯುತ ಶಿಕ್ಷಣದೊಂದಿಗೆ ಶಿಸ್ತು, ಸೇವಾಮನೋಭಾವ , ದೇಶ ಪ್ರೇಮ ಮುಂತಾದ ವಿಚಾರಗಳನ್ನು ಕಲಿತಾಗ ಉತ್ತಮ ಭಾರತ ನಿರ್ಮಾಣ ಆಗುತ್ತದೆ. ಈ ಶಿಕ್ಷಣ ಸ್ಕೌಟ್ಸ್ ಗೈಡ್ಸ್ ನಿಂದ ಸಾಧ್ಯ ಎಂದು ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಗಿರುವ ಅನಿಲ್ ದಾಸ್ ಅವರು ಅಭಿಪ್ರಾಯ ಪಟ್ಟರು.




ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ,ಮಂಗಳೂರು ದಕ್ಷಿಣ ತಾಲೂಕಿನ ಉಳ್ಳಾಲ,ಮಂಗಳೂರು ದಕ್ಷಿಣ ಹಾಗೂ ಗುರುಪುರ ಸ್ಥಳೀಯ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಇವರ ಸಹಭಾಗಿತ್ವದಲ್ಲಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೋಳಾರ ಮಂಗಳೂರು ಇಲ್ಲಿ ನಡೆದ ಮಂಗಳೂರು ದಕ್ಷಿಣ ತಾಲೂಕು ಮಟ್ಟದ ಪ್ರಾರಂಭಿಕ ತರಬೇತಿ ಶಿಬಿರ ಹಾಗೂ ಪುನಶ್ಚೇತನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ವಹಿಸಿ ಇಂದು ಶಿಕ್ಷಕರು ಅವರ ಪಠ್ಯ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ತಮ್ಮ ತಮ್ಮ ಶಾಲೆಗಳಲ್ಲಿ ಮಾಡಿಸುವ ಮುಖೇನ ಉತ್ತಮ ವಿದ್ಯಾರ್ಥಿಗಳನ್ನಾಗಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.



ವೇದಿಕೆಯಲ್ಲಿ ಉಳ್ಳಾಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಎಂ ಎಚ್ ಮಲಾರ್,ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್,ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್,ಜಿಲ್ಲಾ ತರಬೇತಿ ಆಯುಕ್ತೆ ಜಯಶ್ರೀ, ಉಳ್ಳಾಲ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರು ಜಗದೀಶ್ ಶೆಟ್ಟಿ,ಉಳ್ಳಾಲ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಕೆ ಎಂ ಕೆ ಮಂಜನಾಡಿ,ಶಿಬಿರ ನಾಯಕರು ಗುರುಮೂರ್ತಿ ನಾಯ್ಕಪು ,ಶಿಬಿರ ಸಹಾಯಕರು ವಿನೋದ್ ಚೇವಾರ್ , ಜಿಲ್ಲಾ ಸಂಸ್ಥೆಯ ಸ್ಥಾನೀಯ ಆಯುಕ್ತರು ಗೀತಾ ಜುಡಿತ್ ಸಲ್ದಾನ,CRP ಮೋಹನ್,ಉಳ್ಳಾಲ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಲಿಡಿಯ,ಮಂಗಳೂರು ದಕ್ಷಿಣ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರೀತಿ ಲೋಬೊ,ಗುರುಪುರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮಿ,ಮಂಗಳೂರು ದಕ್ಷಿಣ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಸಂಧ್ಯಾ ಮುಂತಾದವರು ಉಪಸ್ಥಿತರಿದ್ದರು

ಪ್ರಾರಂಭಿಕ ತರಬೇತಿ ಶಿಬಿರದಲ್ಲಿ ಮತ್ತು ಪುನಶ್ಚೇತನ ಶಿಬಿರದಲ್ಲಿ ತಾಲೂಕಿನ 50 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು
ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಪ್ರಸ್ತಾವನೆ ಗೈದರು
ಕಾರ್ಯಕ್ರಮವನ್ನು ರಾಜ್ಯ ಪ್ರತಿನಿಧಿ ತ್ಯಾಗo ಹರೇಕಳ ಇವರು ನಿರ್ವಹಿಸಿದರು.ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರೀತಿ ಲೋಬೊ ಧನ್ಯವಾದ ವಿತ್ತರು ಕಾರ್ಯದರ್ಶಿ ಲಿಡಿಯ ಸಹಕರಿಸಿದರು

