ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ಸವಾರ – ಗುಂಡಿಯಲ್ಲೇ ಸ್ಕೂಟರ್ ಇಟ್ಟು ಪ್ರತಿಭಟನೆ..!

0 0
Read Time:1 Minute, 6 Second

ಮಂಗಳೂರು : ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಗೆ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ಸುರತ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಬರೆ ಕಾಂಕ್ರೀಟ್ ಹಾಗೂ ಡಾಂಬರು ಹಾಕಿದ್ದು ಇದೀಗ ಭಾರಿ ಮಳೆಗೆ ಹೆದ್ದಾರಿ ಹೊಂಡಮಯವಾಗಿದೆ ಈ ಹೊಂಡಕ್ಕೆ ಸ್ಕೂಟರ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ.

ಇದರಿಂದ ಬೇಸತ್ತ ಅವರು, ತಾವು ಬಿದ್ದ ಹೊಂಡದಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿ, ತಾವೂ ಅದರ ಪಕ್ಕದಲ್ಲೇ ನಿಂತು ಈ ದುರವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೂ ಗುಂಡಿಗಳ ಕುರಿತು ಎಚ್ಚರಿಸುವ ಮೂಲಕ ಗಮನ ಸೆಳೆದರು. ಇಷ್ಟೆಲ್ಲ‌ ಆದರೂ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಸಂಚಾರ ಪೋಲಿಸರು ದಂಡ ವಿಧಿಸುವಲ್ಲಿಯೇ ನಿರತರಾಗಿದ್ದು, ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *