
ತಮ್ಮ ವಿರುದ್ಧ ಎಸ್‌ಐಟಿ ದಾಖಲಿಸಿದ್ದ ಪ್ರಕರಣದ ರದ್ದು ಕೋರಿ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ನಾಲ್ವರ ಮೇಲೆ ಎಸ್‌ಐಟಿ ದೌರ್ಜನ್ಯ ಮಾಡಬಾರದು ಎಂದು ಸೂಚಿಸಿ, ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.


ಇದೇ ಪ್ರಕರಣದಲ್ಲಿ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ, ಅಂದೇ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬೆನ್ನಲ್ಲೇ, ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಇದೆಲ್ಲದರ ನಡುವೆ, ತಿಮರೋಡಿ, ಗಿರೀಶ್, ಜಯಂತ್, ವಿಠಲಗೌಡ ಅವರ ಮೇಲೆ ದೌರ್ಜನ್ಯ ಮಾಡದಂತೆ ಹೈಕೋರ್ಟ್ ಆದೇಶಿಸಿದೆ.

ಇನ್ನು, ಇನ್ನು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿರುವ ‘ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡಿದ್ದಾರೆ’ ಎಂಬ ಪ್ರಕರಣಕ್ಕೆ ಇತ್ತೀಚೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್ ಕಲಾಪದ ಸಾರಾಂಶ
ಹಿರಿಯ ವಕೀಲ ಎಸ್ ಬಾಲನ್: ಚಿನ್ನಯ್ಯ ವಿರುದ್ದ ಪರ್ಜುರಿ ಕೇಸ್ ಹಾಕಿ ಅದರ ಆಧಾರದ ಮೇಲೆ ಹೋರಾಟಗಾರರಿಗೆ ನೋಟಿಸ್ ಕೊಡುವುದು ಬಿಎನ್‌ಎಸ್‌ಎಸ್ 215(1)(ಬಿ) ಪ್ರಕಾರ ಎಸ್ಐಟಿ ಪೊಲೀಸರು ಕಾನೂನು ಉಲ್ಲಂಘಿಸಿದ್ದಾರೆ.
ಸರ್ಕಾರದ ಪರ ವಕೀಲರು: ಗಿರೀಶ್ ಮಟ್ಟೆಣ್ಣನವರ್, ತಿಮರೋಡಿ, ಜಯಂತ್, ವಿಠಲಗೌಡ ರೇ ಈ ಪ್ರಕರಣದ ಆರೋಪಿಗಳು. ಹಾಗಾಗಿ ಅವರನ್ನು ತನಿಖೆ ಮಾಡಬೇಕಿದೆ.
ಹೈಕೋರ್ಟ್: ಅವರು ಆರೋಪಿಗಳಾಗಿದ್ದರೆ ಪ್ರತ್ಯೇಕ ಎಫ್ಐಆರ್ ಮಾಡಬೇಕಿತ್ತು. ಅದರ ಬದಲು ಕಾನೂನು ಉಲ್ಲಂಘಿಸಿ ಯಾಕೆ ಎಫ್ಐಆರ್ ಮಾಡಬೇಕು?
ಹಿರಿಯ ವಕೀಲ ಬಾಲನ್: ನಾಲ್ವರು ಹೋರಾಟಗಾರರ ಹೆಸರು ಎಫ್ಐಆರ್ ನಲ್ಲಿ ಇಲ್ಲ. ಎಲ್ಲಾ ನೋಟಿಸ್ ಗೆ ಹಾಜರಾಗಿದ್ದಾರೆ. 9 ನೋಟಿಸ್ ಪೈಕಿ 9 ನೋಟಿಸ್ ಗೆ ಹಾಜರಾಗಿದ್ದಾರೆ. ಸುಮಾರು 100 ಗಂಟೆ ವಿಚಾರಣೆ ಎದುರಿಸಿದ್ದಾರೆ. ಆದರೂ ಹೋರಾಟಗಾರರನ್ನು ಆರೋಪಿ ಮಾಡಿದ್ರೆ ಹೇಗೆ ?
ಹೈಕೋರ್ಟ್: ನಾಲ್ವರು ಆರೋಪಿಗಳು ಅನ್ನೋದನ್ನು ರೆಕಾರ್ಡ್ ಮಾಡಿಕೊಳ್ಳೋದಾ? (ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ)
ಸರ್ಕಾರದ ಪರ ವಕೀಲರು: ಎಸ್. ಈ ನಾಲ್ವರು (ಮಟ್ಟೆಣ್ಣನನವರ್, ತಿಮರೋಡಿ, ಜಯಂತ್, ವಿಠಲ ಗೌಡ) ಆರೋಪಿಗಳು. ಅವರು ಜಾಮೀನು ತಗೊಳ್ಳಲಿ
ಹೈಕೋರ್ಟ್: ನಾಲ್ವರ ಮೇಲೆ ಯಾವುದೇ ದೌರ್ಜನ್ಯ ಮಾಡಬಾರದು
ಹಿರಿಯ ವಕೀಲ ಎಸ್ ಬಾಲನ್: ಯಾಕೆ ಜಾಮೀನು ತಗೋಬೇಕು ? ಹೋರಾಟಗಾರರನ್ನು, ದೂರುದಾರರನ್ನೇ ಕಾನೂನು ಉಲ್ಲಂಘಿಸಿ ಎಫ್ಐಆರ್ ಮಾಡಿದ್ರೆ ಅದನ್ಜು ಒಪ್ಪಬೇಕಾ ? ಬಿಎನ್‌ಎಸ್‌ಎಸ್ 215(1)(ಬಿ) ಪ್ರಕಾರ ಇದು ಕಾನೂನು ಬಾಹಿರ
ಹೈಕೋರ್ಟ್: ಪೂರ್ತಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿದೆ.

