
Read Time:1 Minute, 8 Second
ಸೌದಿ ಅರೇಬಿಯಾ ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಹಿಂದೇಟಾಗಿದ್ದು, ಬದಲಾಗಿ ಭಾರತದಲ್ಲಿ ಹೂಡಿಕೆ ಮಾಡಲು ಹೊರಟಿದೆ. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿ, ಭಾರತದಲ್ಲಿ 8 ಲಕ್ಷ ಕೋಟಿ ಹೂಡಿಕೆ ಮಾಡಲು ಸೌದಿ ಅರೇಬಿಯಾ ರೆಡಿ ಆಗಿದೆ.


ಈ ಹಿಂದೆ ಸೌದಿ ಪಾಕಿಸ್ತಾನಕ್ಕೆ 2 ಲಕ್ಷ ಕೋಟಿ ಹೂಡಿಕೆಯ ಭರವಸೆ ನೀಡಿತ್ತು, ಆದರೆ ನಂತರ ಅದು 40 ಸಾವಿರ ಕೋಟಿ ಆಗಿತ್ತು.
ಈಗ ಪಾಕಿಸ್ತಾನ ಹೂಡಿಕೆಯ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.


ಈ ಹಿಂದೆ ಜಗತ್ತಿನ ಅತಿ ದೊಡ್ಡ ತೈಲ ರಫ್ತು ಮಾಡುವ ದೇಶ ಸೌದಿ ಅರೇಬಿಯಾವು ಭಾರತದಲ್ಲಿ 100 ಬಿಲಿಯನ್ (7 ಲಕ್ಷ ಕೋಟಿ) ಹೂಡಿಕೆ ಮಾಡಿತ್ತು. ಭಾರತದ ಪ್ರಗತಿಯ ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪೆಟ್ರೋ ಕೆಮಿಕಲ್ಸ್, ಮೂಲಸೌಕರ್ಯ, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹೂಡಿಕೆಯ ನಿರ್ಧಾರ ಕೈಗೊಂಡಿತ್ತು.
