
ಮಂಗಳೂರು: ದ ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ದ ಕ ಜಿಲ್ಲಾ ಸಂಘಗಳ ಒಕ್ಕೂಟ, ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವ ವೇದಿಕೆ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಅಯೋಜನೆಯಲ್ಲಿ ಬೊಂದೇಲ್ ನ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನ ಸಭಾಂಗಣದಲ್ಲಿ



ಸರ್ವಜ್ಞ ಜಯಂತಿ ಆಚರಣೆಗೂ ಮೊದಲು, ಮಂಗಳೂರು ಉತ್ತರ ವಿಧಾನ ಸಭಾ ಶಾಸಕರಾದ ಡಾ, ವೈ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ , ಸಹಿತ ಕುಲಾಲ ಕುಂಬಾರ ಸಮುದಾಯದ ನಾಯಕರುಗಳಾದ ಡಾ ಅಣ್ಣಯ್ಯ ಕುಲಾಲ್, ಗಂಗಾದರ ಬಂಜನ್, ಜಯೇಶ್ ಗೋವಿಂದ, ಅನಿಲ್ ದಾಸ್, ದಿನಕರ ಸುರತ್ಕಲ್, ಸುಧಾಕರ್ ಸುರತ್ಕಲ್, ಮಹಾಬಲ ಮಾಸ್ಟರ್, ಸುಕುಮಾರ್ ಬಂಟ್ವಾಳ, ಶೇಷಪ್ಪ ಮಾಸ್ಟರ್, ಅಶೋಕ್ ಕುಲಾಲ್, ದೇವಿಪ್ರಸಾದ್ ಶಕ್ತಿನಗರ, ಹೊನ್ನಯ್ಯ ಕಾಟಿಪಳ್ಳ, ಪ್ರಸಾದ್ ಕುಲಾಲ್, ಶೇಖರ್ ಬೊಂಡಂತಿಲ, ಭೋಜ ಅಡ್ಯಾರ್, ಗಂಗಾಧರ್ ಕೆ. ಉಮೇಶ್ ಕೆ ಏನ್,ಬಬಿತಾ ರವೀಂದ್ರ, ಮಮತಾ ಎ ಕುಲಾಲ್, ಪ್ರಮೀಳಾ ಅನಿಲ್, ಕೆ ಸಿ ಲೀಲಾವತಿ ಸಾವಿತ್ರಿ ಮಹಾಬಲ ಹಾಂಡ ಮುಂತಾದವರ ಜೊತೆ ಬೊಂದೇಲ್ ನ ಸರ್ವಜ್ಞ ವೃತ್ತದ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.

ಬಳಿಕ ಕಾಲೇಜ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ ಭರತ್ ಶೆಟ್ಟಿ ದೀಪಬೆಳಗಿ, ಸರ್ವಜ್ಞ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಸರ್ವಜ್ಞನ ಸಾಮಾಜಿಕ ಶೈಕ್ಷಣಿಕ ಚಿಂತನೆಗಳು ನಮಗೆ ದಾರಿ ದೀಪ ಅಂತ ತಿಳಿಸಿದರು. ಕನ್ನಡ ಸಂಸ್ಕೃತಿಯ ಇಲಾಖೆಯ ರಾಜೇಶ್ ಸ್ವಾಗತಿಸಿದರು.



ಕುಲಾಲ ಸಮುದಾಯದ ರಾಜ್ಯ ನಾಯಕರು ಸರ್ವಜ್ಞ ಜಯಂತಿಯ ರೂವಾರಿ ಡಾ ಅಣ್ಣಯ್ಯ ಕುಲಾಲ್ ಪ್ರಸ್ತಾವನೆ ಯಲ್ಲಿ ಸರ್ವಜ್ಞ ಜಯಂತಿ ಹೋರಾಟದ ಹಿನ್ನಲೆ, ಸರ್ವಜ್ಞ ಜಯಂತಿ ಹಾಗು ವೃತ್ತ ಮಾಡಲು ಸಹಕರಿಸಿದ ಡಾ ಭರತ್ ಶೆಟ್ಟಿ ಹಾಗು ಕರ್ನಾಟಕ ಸರಕಾರದ ಇಂದಿನ ಹಾಗು ಅಂದಿನ ಮುಖ್ಯಮಂತ್ರಿಯವರನ್ನ ನೆನಪಿಸಿಕೊಂಡು ಹೋರಾಟದ ಹಿನ್ನೆಲೆ ತಿಳಿಸಿದರು. ಮನಪಾ ಮಂಗಳೂರು ಮೇಯರ್ ಮನೋಜ್ ಕುಮಾರ್ ಹಾಗು ಗೇರು ಅಭಿವೃದ್ಧಿ ನಿಗಮದ ಮಮತಾ ಗಟ್ಟಿ ಸರ್ವಜ್ಞರ ಚಿಂತನೆಗಳನ್ನ ಮೈಗೂಡಿಸಿಕೊಳ್ಳಲು ಕರೆಕೊಟ್ಟರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಯತೀಶ್ ಕುಮಾರ್ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನ ಪ್ರಾಂಶುಪಾಲ ಗುಣವಂತ ವಿ ಗುನಗಿ ಅಧ್ಯಕ್ಷತೆ ವಹಿಸಿದರು. ಅಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು,
ಸಮಾಜ ಮುಖಿ ಸೇವೆ ಹಾಗೂ 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪಡೆದ, ಮಹಾನಗರ ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ಉರ್ವ ಅವರನ್ನು ಸನ್ಮಾನಿಸಲಾಯಿತು.

ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗಂಗಾದರ ಬಂಜನ್, ಜಯೇಶ್ ಮತ್ತು ಹೆಚ್ ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿ ಸಂಘಟಿಸಿದರು. ಸುಕುಮಾರ್ ಬಂಟ್ವಾಳ ವಂದಿಸಿದರು ಮಂಗಳೂರು, ನೀರುಮಾರ್ಗ, ಸುರತ್ಕಲ್, ಕುಳಾಯಿ, ಕೃಷ್ಣಾಪುರ, ಬಜಪೆ, ಬಂಟ್ವಾಳ, ಉಳ್ಳಾಲ, ಉರ್ವ ಸಂಘಗಳ ಹಿರಿ ಕಿರಿಯ ಮತ್ತು ಮಹಿಳಾ ನಾಯಕರುಗಳು ಭಾಗವಹಿಸಿದ್ದರು.

