
ಉಳ್ಳಾಲ: 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇಂದು ರಾಜ್ಯದೆಲ್ಲಡೆ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ.



ಉಳ್ಳಾಲ ತಾಲೂಕು ಆಡಳಿತ ಮತ್ತು ಉಳ್ಳಾಲ ತಾಲೂಕು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಉಳ್ಳಾಲ ಸಮಿತಿ ಸಹಭಾಗಿತ್ವದಲ್ಲಿ ನಾಟೆಕಲ್ ತಾಲೂಕು ಕಛೆರಿಯಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯ ವಿಕ್ರಮ್ (ಉಪ ತಹಶೀಲ್ದಾರ್ ) ವಹಿಸಿದರು. ಪದವಿಪೂರ್ವ ಕಾಲೇಜು ಕುರ್ನಾಡು ಇದರ ಉಪನ್ಯಾಸಕರಾದ ಡಾ. ಲೋಕೇಶ್ ಕುಲಾಲ್ ನಾರ್ಶ ಇವರು ಉಪನ್ಯಾಸ ನೀಡಿದರು. ಪ್ರವೀಣ್ ಅಮ್ಮೆಂಬಳ ವಚನ- ವಾಚನ ನೀಡಿದ್ದಾರೆ.


ವಿಶೇಷ ಅಭ್ಯಾಗತರಾಗಿ ವೆಂಕಪ್ಪ ಮಾಸ್ಟರ್ ಅಸೈಗೋಳಿ, ಲಯನ್ ಅನಿಲ್ ದಾಸ್, ಭಾಸ್ಕರ ಕುತ್ತಾರ್ , ಶ್ರೀಮತಿ ಶಾಲಿನಿ ಎಂ, ನವೀನ ಪಿದಮಲೆ, ಮಂಜುನಾಥ ಮೂಲ್ಯ ಮಜಲ್, ಜಯಕುಲಾಲ್ ಪಾದಲ್ಪಾಡಿ, ಹರೀಶ್ ಕುಲಾಲ್ ಮೂಳೂರು, ಸುಂದರ್ ಕುಲಾಲ್ ಬಾಲಕೃಷ್ಣ ಸಾಲಿಯನ್ ಕುತ್ತಾರ್ ಕಂಪ (ಮೂಲ್ಯಣ್ಣ) ಉಪಸ್ಥಿತರಿದ್ದರು.

ಜಯಂತ್ ಸಂಕೋಳಿಗೆ ಸ್ವಾಗತ ಧನ್ಯವಾದಗೈದರು, ಪ್ರಜ್ಞಶ್ರೀ ಕುಲಾಲ್ ಮೂಳೂರು ಕಾರ್ಯಕ್ರಮ ನಿರೂಪಣೆ ಮಾಡಿದರು.