
Read Time:52 Second
ಮಂಗಳೂರು : ಮಂಗಳೂರಿನ ಕಾವೂರಿನ ಮಹಾತ್ಮ ನಗರ ಬಡಾವಣೆಯಲ್ಲಿ ಭಾನುವಾರ ಬೆಳಗ್ಗಿನ ಜಾವ ಮನೆ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಸುಮಾರು 1.30 ಯಿಂದ 2.00 ಗಂಟೆ ಸುಮಾರಿಗೆ ಮನೆಯ ಕಡೆ ಬಂದ ನಾಲ್ವರ ತಂಡ ಗೇಟಿನ ಬೀಗ ಮುರಿದು ಮನೆಯ ಮುಂಬಾಗಿಲ ಬೀಗವನ್ನು ರಾಡಿನಿಂದ ಮುರಿಯಲು ಯತ್ನಿಸಿದ್ದಾರೆ. ಈ ಸಂದರ್ಭ ಮನೆ ಯಜಮಾನರಿಗೆ ಎಚ್ಚರಿಕೆಯಾಗಿ ಬೊಬ್ಬೆ ಹಾಕಿದಾಗ ಕಳ್ಳರು ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.

