
Read Time:1 Minute, 15 Second
ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸರು ನಿನ್ನೆ ಬಂಟ್ವಾಳ ತಾಲೂಕಿನಲ್ಲಿ ಭರ್ಜರಿ ಕಾರ್ಯಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಆರೋಪಿಗಳನ್ನು ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳಾದ ರೋಶನ್ ಮತ್ತು ಪಿಲಿಂಗುರಿ ಸತೀಶ ಹಾಗೂ ಬಾಳೆ ಗಣೇಶ , ವೀರಕಂಭದ ಕುಸುಮಾಕರ ಎಂದು ಗುರುತಿಸಲಾಗಿದೆ. ಸೋಮವಾರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂಟಿ ಹೆಂಗಸಿನ ದರೋಡೆ ಪ್ರಕರಣದಲ್ಲಿ ವಿಟ್ಲ ಮೂಲದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಹಿತಿ ಲಭ್ಯವಾಗಿದೆ. ನಿನ್ನೆ ವ್ಯಾಗನರ್ ಕಾರ್‌ನಲ್ಲಿ ಬಂದ ಸೋಮವಾರ ಪೇಟೆ ಪೋಲೀಸರು ಮಂಚಿ ಸಮೀಪ ಆರೋಪಿಗಳು ಕೋಳಿ ಅಂಕಕ್ಕೆ ಹೋಗುವಾಗ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಜಬ್ಬಾರ್ ಎಂಬಾತ ಜೈಲಿನಲ್ಲಿ ಕೂತು ಸ್ಕೆಚ್ ಹಾಕಿ ಈ ಆರೋಪಿಗಳಿಂದ ಒಂಟಿ ಹೆಂಗಸಿನ ಕಣ್ಣಿಗೆ ಮೆಣಸಿನ ಪುಡಿ ಎರಚಿ 6 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

