
Read Time:1 Minute, 3 Second

ಮಂಗಳೂರು : ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಮೇಲು ಬೀರಿದ್ದು, ಇದೀಗ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಕುಸಿದಿದೆ. ಇದರಿಂದ ಮಂಗಳೂರು- ಉಡುಪಿಗೆ ತೆರಳುವ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.


ಹೌದು ಭಾರಿ ಮಳೆಯಿಂದ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಬಳಿ ರಸ್ತೆ ಬದಿ ಭೂಕುಸಿತ ಉಂಟಾಗಿದೆ.
ಹೆದ್ದಾರಿ ಬದಿ ರಸ್ತೆಯನ್ನು ಗೆಲ್ಗಾಸ್ ಕಂಪನಿ ಆಗೆದಿತ್ತು. ಹೊಂಡದಲ್ಲಿ ನೀರು ತುಂಬಿಕೊಂಡು. ರಸ್ತೆಯ ಬದಿ ಕುಸಿತ ಕಂಡಿದೆ. ಲಾರಿ, ಬೈಕ್ ಸೇರದಂತೆ ಹಲವು ವಾಹನಗಳು ತೆರಳಿದ ಕೂಡಲೇ ರಸ್ತೆ ಕುಸಿದಿದೆ. ಹಾಗಾಗಿ ಭಾರಿ ಅನಾಹುತ ಒಂದು ತಪ್ಪಿದೆ.ಉಡುಪಿಯಿಂದ
ಮಂಗಳೂರಿಗೆ ತೆರಳುವ ವಾಹನಗಳ ಸವಾರರು ಟ್ರಾಫಿಕ್ ಜಾಮ್ ಆಗಿ ಇದೀಗ ಪರದಾಟ ನಡೆಸುತ್ತಿದ್ದಾರೆ.