
Read Time:47 Second
ಮಂಗಳೂರು ನಗರದ ನಂತೂರು ಪದವು ಬಳಿ ಮಂಗಳವಾರ ಬೆಳಗ್ಗೆ ನಡೆದ ರಸ್ತೆ ಅಪಘಾತ (accident) ದಲ್ಲಿ ದ್ವಿಚಕ್ರ ಸವಾರನೊಬ್ಬ ದಾರುಣ ಅಂತ್ಯ ಕಂಡಿದ್ದಾನೆ. ನಂತೂರು ಪದವು ಬಳಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಸ್ಕೂಟಿ ರಸ್ತೆಗೆ ಉರುಳಿದ್ದು, ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಸವಾರನ ಮೇಲೆ ಹರಿಯಿತು ಎಂದು ಹೇಳಲಾಗಿದೆ.



ಇದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದು, ಮೃತ ವ್ಯಕ್ತಿಯ ಹೆಚ್ಚನ ಮಾಹಿತಿ ತಿಳಿಯ ಬೇಕಷ್ಟೇ..
