ವಿಶ್ವದ ಪ್ರತಿಷ್ಠಿತ ರೋಲ್ಸ್ ರಾಯ್ಸ್‌ ನಲ್ಲಿ ಉದ್ಯೋಗ ಪಡೆದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೆ.ಎಸ್. ರಿತುಪರ್ಣ

0 0
Read Time:2 Minute, 9 Second

ಮಂಗಳೂರು:ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕರಾವಳಿ ಕನ್ನಡತಿಯೋರ್ವಳು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಪಡೆದ ಕರಾವಳಿಯ 20 ವರ್ಷದ ಕಿರಿಯ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕೆ.ಎಸ್. ರಿತುಪರ್ಣ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಪ್ರಮುಖ ರೋಲ್ಸ್ ರಾಯ್ಸ್‌ನಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ಸಂಬಳದ ಕೆಲಸವನ್ನು ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿಯಾಗಿರುವ ರಿತುಪರ್ಣಗೆ ಬಾಲ್ಯದಲ್ಲಿ ವೈದ್ಯೆ ಆಗಬೇಕು ಎಂದು ಕನಸು ಇತ್ತು. ಆದರೆ ಕಾರಣಾಂತರಗಳಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೋಟಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.ಸುರೇಶ್ ಮತ್ತು ಗೀತಾ ಅವರ ಪುತ್ರಿ ರಿತುಪರ್ಣ ಪ್ರಸ್ತುತ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್‌ನಲ್ಲಿ ಪದವಿ ಪಡೆಯುತ್ತಿದ್ದಾರೆ. ನೀಟ್ ಮೂಲಕ ವೈದ್ಯಕೀಯ ಸೀಟು ಪಡೆಯಲು ವಿಫಲವಾದ ನಂತರ ಆರಂಭದಲ್ಲಿ ನಿರಾಶೆಗೊಂಡಿದ್ದ ಅವರು, ಇಷ್ಟವಿಲ್ಲದ ಪರ್ಯಾಯವಾಗಿ ಪ್ರಾರಂಭವಾದದ್ದು ಈಗ ಜೀವನವನ್ನು ಬದಲಾಯಿಸುವಂತಿದೆ.ಇನ್ನೋವೇಶನ್ ಸಮ್ಮೇಳನದಲ್ಲಿ ಚಿನ್ನದ ಪದಕ ಪಡೆದ ರಿತುಪರ್ಣ, ಬಳಿಕ ರೋಲ್ಸ್ ರಾಯ್ಸ್ ಕಂಪನಿಗೆ ಇಂಟರ್ನ್ಶಿಪ್‌ಗೆಂದು ತೆರಳಿದ್ದರು. 8 ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ರಿತುಪರ್ಣರ ಚಾಕಚಕ್ಯತೆ ಕಂಡು ರೋಲ್ಸ್ ರಾಯ್ ಕಂಪನಿ ನೇರವಾಗಿ ನೇಮಕಾತಿ ಪತ್ರ ನೀಡಿದೆ. ಈ ಸಾಧನೆಗೆ ಪೋಷಕರ ಹಾಗೂ ಕಾಲೇಜಿನವರ ಪ್ರೋತ್ಸಾಹ ಇದ್ದು, ಇನ್ನೂ ಕೆಲವೇ ತಿಂಗಳಲ್ಲಿ ಅಮೆರಿಕಕ್ಕೆ ಹಾರಲಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *