ರಕ್ಷಾ ಬಂಧನಕ್ಕೆ ರಜೆ ತೆಗೆದುಕೊಂಡ್ರೆ 7 ದಿನದ ಸಂಬಳ ಕಟ್ !

0 0
Read Time:2 Minute, 35 Second

ರಕ್ಷಾ ಬಂಧನ ಹಬ್ಬಕ್ಕೆ ರಜಾ ತೆಗೆದುಕೊಳ್ಳುವ ಉದ್ಯೋಗಿಗಳಿಗೆ 7 ದಿನಗಳ ಸಂಬಳ ಕಟ್‌ ಮಾಡುವುದಾಗಿ ಇಲ್ಲೊಂದು ಕಂಪೆನಿ ಹೇಳಿಕೊಂಡಿದ್ದು, ಕಂಪೆನಿಯ ಈ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ಕಂಪೆನಿಯ ಬಾಸ್‌ ಹೆಚ್. ಆರ್‌ ಮ್ಯಾನೇಜರ್‌ ಒಬ್ಬರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಈ ಬಗ್ಗೆ ಮಹಿಳೆ ಲಿಂಕ್ಡ್‌ ಇನ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದು, ಈ ಪೋಸ್ಟ್ ಇದೀಗ ಭಾರೀ ವೈರಲ್‌ ಆಗುತ್ತಿದೆ. ಪಂಜಾಬ್‌ನ ಕಂಪೆನಿಯೊಂದು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದೆ. ಹೆಚ್.‌ಆರ್ ಮ್ಯಾನೇಜರ್‌ ಆಗಿ ನಾನು ನೌಕಕರ ಹಕ್ಕುಗಳನ್ನು ರಕ್ಷಿಸಲು ನಿಂತಿದ್ದರಿಂದ ತನ್ನ ಕಂಪೆನಿಯು ತನ್ನನ್ನು ವಜಾಗೊಳಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಜೊತೆಗೆ ಬಾಸ್‌ ಮತ್ತು ಆ ಮಹಿಳೆಯ ವಾಟ್ಸ್‌ಆಪ್‌ ಚಾಟ್‌ ಸ್ಕ್ರೀನ್‌ ಶಾಟ್‌ ಅನ್ನು ಕೂಡಾ ಆಕೆ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್‌ 15 ಸ್ವಾತಂತ್ರ್ಯ ದಿನದಂದು ಕಂಪೆನಿಗೆ ರಜೆ ಇರುವ ಕಾರಣ, ಆಗಸ್ಟ್‌ 19 ರಂದು ರಕ್ಷಾ ಬಂಧನಕ್ಕೆ ಆಫ್‌ ಡೇ ಅಥವಾ ಫುಲ್‌ ಡೇ ರಜೆ ಇರುವುದಿಲ್ಲ. ಪ್ರತಿಯೊಬ್ಬರು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು. ಆ ದಿನ ಯಾರಾದರೂ ಕೆಲಸಕ್ಕೆ ರಜೆ ಮಾಡಿದ್ರೆ ಅವರ 7 ದಿನಗಳ ಸಂಬಳವನ್ನು ಕಟ್‌ ಮಾಡುವುದು. ಈ ನಿರ್ಧಾರವನ್ನು ಒಪ್ಪದಿದ್ದರೆ, ಧಾರಾಳವಾಗಿ ಅಂತಹವರು ಕೆಲಸಕ್ಕೆ ರಾಜೀನಾಮೆಯನ್ನು ಸಲ್ಲಿಸಬಹುದು ಬಾಸ್‌ ಹೇಳಿಕೊಂಡಿದ್ದಾರೆ. ಆದರೆ ಕಾನೂನಿನ ಪ್ರಕಾರ ಹೀಗೆ ಸರಿಯಾದ ನಿರ್ಧಾರವಲ್ಲ ಎಂದು ಈ ಮಹಿಳೆ ಕಂಪೆನಿಯ ಉದ್ಯೋಗಿಗಳ ಪರ ನಿಂತು ಮಾತನಾಡಿದ್ದಾರೆ. ಇದಕ್ಕಾಗಿ ಆ ಮಹಿಳೆಯನ್ನೇ ಕೆಲಸದಿಂದ ವಜಾಗೊಳಿಸಿದ್ದಾರೆ. ಮಹಿಳೆಯ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕಂಪೆನಿ ʼಇದೆಲ್ಲಾ ಸುಳ್ಳು. ಇಲ್ಲಿ ವಿಕ್ಟಿಮ್‌ ಕಾರ್ಡ್‌ ಮತ್ತು ಸಿಂಪತಿಯನ್ನು ಪಡೆದುಕೊಳ್ಳುವುದು ತುಂಬಾ ಸುಲಭವಾಗಿದೆ. ನಿಜವಾದ ಸತ್ಯವೆಂದರೆ ಆ ಮಹಿಳೆಗೆ ಕೆಲಸದಲ್ಲಿ ಶ್ರದ್ಧೆ ಎಂಬುದೇ ಇಲ್ಲ, ಮಗಳ ಹೋಮ್‌ ವರ್ಕ್‌ ಮಾಡಲು ಆಫೀಸ್‌ ಸಮಯವನ್ನು ತೆಗೆದುಕೊಳ್ಳುತ್ತಿದ್ದಳುʼ ಎಂದು ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *