
ಮಂಗಳೂರು: ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಿ ಶರಣ್ ಪಂಪ್ವೆಲ್ ವಿರುದ್ದ ದಾಖಲಿಸಿದ ಪ್ರಕರಣ ರದ್ದು ಗೊಳಿಸಲು ಮನವಿ ಸಲ್ಲಿಸಲಾಗಿದೆ.


ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ” B ” ರಿಪೋರ್ಟ್ ರದ್ದು ಪಡಿಸಲು ಮತ್ತು ಕರ್ನಾಟಕ ಸರಕಾರ ದ್ವೇಷ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪುವೆಲ್ ರವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯಲು ಹಾಗು ಆ ಪ್ರಕರಣದಲ್ಲಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಪೊಲೀಸ್ ಅಧಿಕಾರಿಯ ಕಡ್ಡಾಯ ರಜೆ ರದ್ದುಪಡಿಸಲು ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಜ್ಯಪಾಲರು ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಿಗೆ ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಹಕಾರ್ಯದರ್ಶಿ ಗುರುಪ್ರಸಾದ್ ಹಾಗು ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ ಈ ಸಂಧರ್ಭದಲ್ಲಿ ಉಪಸ್ಥಿತಿ ಇದ್ದರು.

