
ಕಡಬ: ಸಹೋದರ ವ್ಯಕ್ತಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ನಡೆದಿದೆ. ಕಡಬ ಕೌಕ್ರಾಡಿ ಗ್ರಾಮದ ನಿವಾಸಿ ರಾಜಶೇಖರ (37) ಹಲ್ಲೆಗೆ ಒಳಗಾದವರು. ಅವರ ಸಹೋದರ ಜಯರಾಜ್ ಹಲ್ಲೆ ನಡೆಸಿದವರು.


ರಾಜಶೇಖರ (37) ಅವರು ದಿನಾಂಕ: 16.07.2025 ರಂದು ರಾತ್ರಿ ಸಮಯ ತನ್ನ ಮನೆಯಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿದ್ದಾಗ, ಸ್ಥಳಕ್ಕೆ ಬಂದ ಆರೋಪಿ ರಾಜಶೇಖರ ಅವರ ಸಹೋದರ ಮನೋಜ್‌ಕುಮಾರ್ ಎಂಬವರು ರಾಜಶೇಖರ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳವಾಗಿರುತ್ತದೆ. ಅದೇ ಸಮಯಕ್ಕೆ ರಾಜಶೇಖರ್ ಅವರ ಮತ್ತೋರ್ವ ಸಹೋದರ ಜಯರಾಜ್ ಎಂಬವರು ಕತ್ತಿಯಿಂದ ರಾಜಶೇಖರ್ ಅವರಿಗೆ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ರಾಜಶೇಖರ್ ಅವರಿಗೆ ಗಾಯವಾಗಿರುತ್ತದೆ. ಗಾಯಗೊಂಡಿದ್ದ ಅವರನ್ನು ಅವರ ಮತ್ತೋರ್ವ ಸಹೋದರ ಬಾಲಕೃಷ್ಣ ಎಂಬವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.