
Read Time:57 Second
ಪುಂಜಾಲಕಟ್ಟೆ : ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ನಡೆದಿದೆ.



ಅಪಘಾತದಲ್ಲಿ ಬೈಕ್ ಸವಾರ ಮಾರ್ನಬೈಲು ನಿವಾಸಿ ಇಮ್ರಾನ್ ಮೊಹಮ್ಮದ್ ತಾಹ ಎಂಬವರು ಸ್ಥಳದಲ್ಲೇ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.
ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಕಾರಿನ ಎದುರಿನ ಗ್ಲಾಸಿಗೆ ಬಿದ್ದು ಹೊರಗಡೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ, ಕಾಲು ತುಂಡಾಗಿದ್ದು, ತಲೆಗೆ ತೀವ್ರ ಏಟು ಬಿದ್ದು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



