ವಕೀಲ ದಂಪತಿ ಮೇಲೆ ಹಲ್ಲೆ ಖಂಡಿಸಿ: ಮಂಗಳೂರು ವಕೀಲರ ಸಂಘದ ಸದಸ್ಯರಿಂದ ಪ್ರತಿಭಟನೆ

0 0
Read Time:2 Minute, 10 Second

ಮಂಗಳೂರು ವಕೀಲರ ಸಂಘದ ಸದಸ್ಯರಾದ ಶ್ರೀ ಜಯಪ್ರಕಾಶ್ ಹಾಗೂ ಶ್ರೀಮತಿ ಸ್ವಾತಿ ಇವರ ಮೇಲೆ ವೆಲೇರಿಯನ್ ಮೆಂಡೋನ್ಸ ಎಂಬುವನು ಹಲ್ಲೆ ಮಾಡಿದ್ದು ಈಗಾಗಲೇ ಆತನ ಮೇಲೆ ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿದ್ದು, ಆರೋಪಿಯ ಮುಲಾಜಿಗೆ ಪೊಲೀಸರು ಈವರೆಗೂ ಆತನ ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆಯಲ್ಲಿ, ಮಂಗಳೂರು ವಕೀಲರ ಸಂಘದ ಸದಸ್ಯರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಮೋನಪ್ಪ ಭಂಡಾರಿ, ಶ್ರೀ ಕೆ ಶಂಭುಶರ್ಮ, ಅಶೋಕ ಅರಿಗ, ಪೃಥ್ವಿರಾಜ್ ರೈ, ರವೀಂದ್ರನಾಥ್ ಪಿ ಎಸ್, ಶ್ರೀ ನರಸಿಂಹ ಹೆಗಡೆ, ಶ್ರೀ ನಂದಕೀಶೋರ್, ಪುಷ್ಪಲತಾ ಯು ಕೆ, ಸುಮನಾ ಶರಣ್ ಹಾಗೂ ಹಲವಾರು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಆರೋಪಿಯನ್ನು ಶೀಘ್ರಬಂಧಿಸುವಂತೆ ಆಗ್ರಹಿಸಿದರು ಹಾಗೂ ಠಾಣೆಯ ನಿರೀಕ್ಷಕನಾದ ಟಿ ಡಿ ನಾಗರಾಜ್ ಅವರ ಕುಮ್ಮಕಿನಿಂದ ತನಿಖೆ ದಿಕ್ಕು ತಪ್ಪಿಸುತ್ತಿದ್ದು, ಕೂಡಲೇ ಅಮಾನತುಗೊಳಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು, ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಚ್ ವಿ ರಾಘವೇಂದ್ರ ಅವರು ಪ್ರತಿಭಟನೆ ನೇತೃತ್ವ ವಹಿಸಿ, 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಿದ್ದಲ್ಲಿ ಜಿಲ್ಲಾ ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಸಮನೆ, ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ, ಕೋಶಾಧಿಕಾರಿ ಶ್ರೀ ಗಿರೀಶ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರು, ಪ್ರತಿಭಟನೆಯಲ್ಲಿ ಭಾಗವಹಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *