
Read Time:1 Minute, 6 Second
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಫೆಬ್ರವರಿ 04) ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು. ಈ ವೇಳೆ ನಮ್ಮ 10 ವರ್ಷದ ಆಡಳಿತದಲ್ಲಿ 25 ಕೋಟಿ ಜನಸಂಖ್ಯೆಯನ್ನ ಬಡತನದಿಂದ ಮೇಲೆತ್ತಲಾಗಿದೆ ಎಂದು ಮಾಹಿತಿ ನೀಡಿದರು.


ಜನರಿಗೆ ನಿಜವಾದ ಅಭಿವೃದ್ಧಿಯನ್ನು ಒದಗಿಸಿದೆ. ಬಡವರಿಗೆ 4 ಕೋಟಿ ಮನೆಗಳನ್ನು ನೀಡಲಾಗಿದೆ. ಆದ್ರೆ, ಕೆಲವರು ಗುಡಿಸಲಿನಲ್ಲಿ ಫೋಟೋ ಸೆಷನ್’ಗಳನ್ನು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯನ್ನ ತಿವಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ತಮ್ಮ ಸ್ವಂತ ಮನರಂಜನೆಗಾಗಿ ಬಡವರ ಗುಡಿಸಲುಗಳಲ್ಲಿ ಫೋಟೋ ಸೆಷನ್ಗಳನ್ನು ನಡೆಸುವವರು ಸಂಸತ್ತಿನಲ್ಲಿ ಬಡವರ ಉಲ್ಲೇಖವನ್ನು ನೀರಸವಾಗಿ ಕಾಣುತ್ತಾರೆ” ಎಂದರು.

