ಬಂಟ್ವಾಳ: ಪೊಸಳ್ಳಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿರಂತರ ವಿದ್ಯಾರ್ಥಿ ವೇತನ ವಿತರಣೆ

0 0
Read Time:4 Minute, 17 Second

ಬಂಟ್ವಾಳ : ಐಎಎಸ್, ಐಪಿಎಸ್ ಆಗಲು ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು, ಪ್ರತಿಭಾವಂತ ವಿದ್ತಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಕೊಡಬೇಕು, ಅಷ್ಟೇ ಅಲ್ಲದೇ ಉನ್ನತ ಶಿಕ್ಷಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣದ ಯಾವುದೇ ಸಮಸ್ಯೆ ಬಾರದಂತೆ ‌ಅವರಿಗೆ ಬೇಕಾಗುವ ಹಣದ ಕ್ರೋಡೀಕರಣದ ಅಗತ್ಯ ಇದ್ದು ಇದಕ್ಕೆ ಎಲ್ಲರ ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ‌ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಮೂಲ್ಯ ತಿಳಿಸಿದರು.

ಅವರು ಬಿ.ಸಿ.ರೋಡಿನ ಫೊಸಳ್ಳಿ ಸಮುದಾಯವಭವನದಲ್ಲಿ ಆದಿತ್ಯವಾರ ನಡೆದ ಬಂಟ್ವಾಳ ತಾಲೂಕು ಕುಲಾಲ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಟ್ವಾಳ ತಾಲೂಕು ಕುಲಾಲ ಸಂಘದ ವೆಬ್ ಸೈಟ್ ಲೋಕಾರ್ಪಣೆ ಮಾಡಿ ಮಾತನಾಡಿದ ದ.ಕ. ಜಿಲ್ಲಾ ಕುಲಾಲ ಕುಂಬಾರ ಯುವವೇದಿಕೆಯ ಅಧ್ಯಕ್ಷ ಲ. ಅನಿಲ್ ದಾಸ್ ಮಾತನಾಡಿ ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಬೇರೆ ಬೇರೆ ರೀತಿಯ ಸಂಘಟನೆಗಳಿದ್ದರೂ ಯಾವುದೇ ಬೇದಭಾವ ಇಲ್ಲದೇ ಒಂದೇ ಮನಸ್ಸಿನಿಂದ ಸಮಾಜ ಸಂಘಟನೆಯನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಲಪಡೆದ ಹನ್ನೊಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೂವತ್ತೊಂಬತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿ ವೇತನ ಮತ್ತು ಬಡಕುಟುಂಬದ ಪ್ರತಿಭಾವಂತ ಐವತ್ತೊಂಬತ್ತು ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ ನೀಡಲಾಯಿತು.

ಇದೇ ಸಂದರ್ಭಏಷ್ಯಾ ಡೆಫ್ ರಾಪಿಡ್ ಚಾಂಪಿಯನ್ ಚೆಸ್ನಲ್ಲಿ ಚಿನ್ನದ ಪದಕ ವಿಜೇತೆ ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕುಲಾಲ್ ರವರನ್ಮು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ನಾಸಿಕ್ ಹೊಟೇಲ್ ಉದ್ಯಮಿ ಗಣೇಶ್ ಬಂಗೇರ ಭಂಡಾರಿಬೆಟ್ಟು, ಪದ್ಮಿನಿ ದೇವಣ್ಣ, ಉದ್ಯಮಿ ದಯಾಯೋಗೀಶ್, ಸಿದ್ದಕಟ್ಟೆ ಸರಕಾರಿ ಪದವಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಅಭಿನಂದನ್ ಕುಲಾಲ್, ಮಂಗಳೂರು ವಿಶ್ವವಿದ್ಯಾನಿಲಯ ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕ ಡಾ. ಆನಂದ್ ಎಮ್. ಕಿದೂರು, ಹಿರಿಯ ವರದಿಗಾರ ವಿನೋದ್ ಪುದು, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಹೆಸರು ಹೇಳಿದರು.

ಮೀನಾಕ್ಷಿ ಮತ್ತು ಪ್ರೇಮ ಪೊಸಳ್ಳಿ, ನಿರಂತರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಹೆಸರನ್ನು ಸುಶೀಲಾ, ಗಣೇಶ್ ನರಿಕೊಂಬು, ಸತೀಶ್ ಸಂಪಾಜೆ, ತಾರನಾಥ ಮೊಡಂಕಾಪು ಮತ್ತು ರಾಘವೇಂದ್ರ, ನಿರಂತರ ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳ ಹೆಸರನ್ನು ರಮೇಶ್ ಸಾಲ್ಯಾನ್ ಕೈಕುಂಜೆ ವಾಚಿಸಿದರು.

ವೆಬ್ ಸೈಟ್ ಬಗ್ಗೆ ಮಾಹಿತಿಯನ್ನು ಪ್ರೇಮನಾಥ ನೇರಂಬೋಳು ಮತ್ತು ಚಿರಾಗ್ ಕಾಮಾಜೆ ತಿಳಿಸಿದರು. ಕಾರ್ಯಕ್ರಮಕ್ಕೆ ಸುರೇಶ್ ಕುಲಾಲ್ ಬಂಟ್ವಾಳ, ದೇವದಾಸ ಅಗ್ರಬೈಲು, ಗಣೇಶ್ ಬೆದ್ರಗುಡ್ಡೆ, ರಾಧಾಕೃಷ್ಣ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ರಾಜೇಶ್ ರಾಯಿ, ಯೋಗೀಶ್ ಬಂಗೇರ ಸಹಕರಿಸಿದ್ದರು

ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಪ್ರಾಸ್ತಾವಿಕ ವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ಧನ್ಯವಾದ ನೀಡಿದರು. ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *