ಉಡುಪಿ: ಕಳಪೆ ಸೆಟ್ ಆಫ್ ಬಾಕ್ಸ್, ಉಚಿತ ಕೇಬಲ್ ಚಾನೆಲ್ ಹೆಸರಲ್ಲಿ ವಂಚನೆ

0 0
Read Time:2 Minute, 4 Second

ಉಡುಪಿ: ಇತ್ತೀಚೆಗೆ ಕೇಬಲ್ ಅಪರೇಟರುನವರು 2 ವರ್ಷಕೊಮ್ಮೆ ತಮ್ಮ ಸೆಟ್ ಆಫ್ ಬಾಕ್ಸ್ ಗಳನ್ನು ಬದಲಾವಣೆ ಮಾಡುತಿದ್ದು ಇದರಿಂದಾಗಿ ಗ್ರಾಹಕರಿಗೆ ಬಹಳ ತೊಂದರೆ ಆಗಿದೆ. ಕೆಲವೊಂದು ಕೇಬಲ್ ಅಪರೇಟರ್ ಮುಖ್ಯಸ್ಥರ ಸ್ವಂತ ಲಾಭಕ್ಕಾಗಿ ಇತರ ಕೇಬಲ್ ಅಪರೇಟರ್ ಗಳ ಮೂಲಕ ಹೊಸ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಒತ್ತಾಯಿಸುತಿದ್ದಾರೆ.

ಹೊಸ ಹೊಸ ಕಂಪೆನಿಗಳು ಕೇಬಲ್ ಉದ್ಯಮಕ್ಕೆ ಕಾಲಿಟ್ಟಿದ್ದು ಇವರುಗಳು ಗ್ರಾಹಕರಿಗೆ ಹೊಸ ಪ್ಲಾನ್ ಗಳನ್ನು ನೀಡಿದರೆ ಅದನ್ನು ಗ್ರಾಹಕರಿಗೆ ಅಪರೇಟರ್ ಗಳು ನೀಡದೆ ವಂಚಿಸುತಿದ್ದಾರೆ. ಇದೀಗ ಉಡುಪಿಗೆ ಕಾಲಿಟ್ಟಿರುವ ಗುಜರಾತ್ ಮೂಲದ ಸಂಸ್ಥೆ ಗ್ರಾಹಕರಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ಜೊತೆಗೆ ಮೂರು ತಿಂಗಳ ಮಾಸಿಕ ದರವನ್ನು ಉಚಿತವಾಗಿ ನೀಡುತಿರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಇದಾವುದು ಸೌಲಭ್ಯ ಗ್ರಾಹಕರಿಗೆ ನೀಡದೆ ಅಪರೇಟರುಗಳು ವಂಚಿಸುತಿದ್ದಾರೆ.

ಪದೇ ಪದೇ ಬದಲಾಯಿಸುವ ಈ ಪ್ರಕ್ರಿಯೆ ಹೆಚ್ಚು ಸಮಸ್ಯೆ ಆಗುತಿರುವುದು ಹಿರಿಯರಿಗೆ ಮತ್ತು ಗ್ರಾಮಾಂತರ ಜನರಿಗೆ ಅನಾನುಕೂಲ ಆಗಿದೆ. ಚಾನೆಲುಗಳ ನಂಬರ ವ್ಯತ್ಯಾಸ ಇರುವುದರಿಂದ ಮತ್ತು ಚಾನೆಲುಗಳ ಪ್ರಸಾರ ಹಿಂದಿಗಿಂತಲೂ ಕಳಪೆ ಆಗಿರುತ್ತದೆ. ಹೆಚ್ಚಿನ ಭಾಗದಲ್ಲಿ ಗ್ರಾಹಕರು ತಿರಸ್ಕರಿಸಿದರೂ ಒತ್ತಾಯ ಪೂರ್ವಕವಾಗಿ ಅಳವಡಿಸಿದ ಬಗ್ಗೆ ದೂರುಗಳು ಬರುತಿದೆ. ಗ್ರಾಹಕರು ತಮಗೆ ನೀಡಲಾದ ಮೂರು ತಿಂಗಳ ಉಚಿತ ಮಾಸಿಕ ದರದ ಸೌಲಭ್ಯ ನೀಡುವ ಬೇಡಿಕೆ ಕೇಳಿದಾಗ ಗ್ರಾಹಕರೊಂದಿಗೆ ಹಲವು ಅಪರೇಟರುಗಳು ಅನುಚಿತವಾಗಿ ವರ್ತಿಸುತಿದ್ದಾರೆ. ತಕ್ಷಣವೆ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಹಕರು ಒತ್ತಾಯಿಸುತಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *