
ಬಂಟ್ವಾಳ: ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಧರ್ಮಸ್ಥಳ ಪೊಲೀಸ್ ಇಲಾಖಾ ಬೊಲೆರೋ ಜೀಪ್‌ಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ -73 ರಲ್ಲಿ ತಿರುವಿನಲ್ಲಿ ನಡೆದಿದೆ.


ಗಾಯಗೊಂಡ ಆಕ್ಟಿವಾ ಸವಾರನನ್ನು ಪಿಲಾತಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು ನಿವಾಸಿ ಹರ್ಷಿತ್ (19) ಎಂದು ಗುರುತಿಸಲಾಗಿದೆ.
ಸೆ.23ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ ಐ ರವರು ಮಂಗಳೂರು ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಇಲಾಖಾ ಬೊಲೆರೋ KA19 G 0616 ನೇ ಜೀಪ್‌ನಲ್ಲಿ ಚಾಲಕರೊಂದಿಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ -73 ರಲ್ಲಿ KA 70 H 4401 ಆಕ್ಟಿವಾ ಹೋಂಡಾ ಸವಾರ ಹರ್ಷಿತ್ ಎಂಬವರು ಬಿಸಿರೋಡ್ ಕಡೆಯಿಂದ ಪುಂಜಾಲಕಟ್ಟೆ ಕಡೆಗೆ ತನ್ನ ಆಕ್ಟಿವಾ ಹೋಂಡಾವನ್ನು ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತಿದ್ದರು.


ಈ ವೇಳೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ -73 ರಲ್ಲಿ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಇಲಾಖಾ ಬೊಲೆರೋ ಜೀಪ್‌ಗೆ ಡಿಕ್ಕಿ ಹೊಡೆದು ಆಕ್ಟಿವಾ ಹೋಂಡಾ ಸಮೇತ ರಸ್ತೆಗೆ ಬಿದ್ದ ಹರ್ಷಿತ್‌ಗೆ ತಲೆಗೆ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಅವರ ಸಂಬಂಧಿಕರಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.