
Read Time:1 Minute, 12 Second
ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ತಂಡದ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ದೂರುದಾರನನ್ನು ಕೇಸ್ ಹಿಂಪಡೆಯುವಂತೆ ಬೆದರಿಸುತ್ತಿದ್ದಾರೆ ಎಂದು ದೂರುದಾರನ ಪರ ವಕೀಲ SIT ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ದೂರು ನೀಡಿದ್ದಾರೆ.


ಮಂಜುನಾಥ್ ಅವರು ಆ. 1 ರಂದು ದೂರುದಾರನನ್ನು ಕೋಣೆಯಲ್ಲಿ ಕೂಡಿ ಹಾಕಿ ಕೇಸನ್ನು ಹಿಂಪಡೆಯುವಂತೆ ಮತ್ತು ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಲಾಗಿದೆ. ಹಾಗೆಯೇ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ SIT ಮುಖ್ಯಸ್ಥರಿಗೆ ದೂರುದಾರರ ವಕೀಲರು ಇ ಮೇಲ್ ಮೂಲಕ ದೂರು ಸಲ್ಲಿಸಿರುವುದಾಗಿದೆ. ಹಾಗೆಯೇ ತನಿಖಾ ತಂಡದಲ್ಲಿ ಆ ಅಧಿಕಾರಿ ಇದ್ದರೆ ದೂರುದಾರನನ್ನು ಕಾರ್ಯಾಚರಣೆ ಸ್ಥಳಕ್ಕೆ ಕರೆತರುವುದಿಲ್ಲ ಎಂದೂ ವಕೀಲರು ತಿಳಿಸಿದ್ದಾಗಿ ತಿಳಿದು ಬಂದಿದೆ.

