
Read Time:1 Minute, 10 Second
ನವದೆಹಲಿ : ಇತ್ತೀಚಿನ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಈಗ ವೈರಲ್ ಆಗಿದೆ. ತಾನು ಜೈವಿಕವಾಗಿ ಹುಟ್ಟಿಲ್ಲ, ಬದಲಾಗಿ, ಒಂದು ಧ್ಯೇಯವನ್ನ ಪೂರೈಸಲು ದೇವರು ಅವರನ್ನ ಕಳುಹಿಸಿದ್ದಾನೆ ಎಂಬ ನಂಬಿಕೆಯನ್ನ ವ್ಯಕ್ತಪಡಿಸಿದರು.


ಸಂದರ್ಶನದಲ್ಲಿ ದಣಿದಿರದಿರಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದ ಪ್ರಧಾನಿ ಮೋದಿ,”ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ” ಎಂದು ಹೇಳಿದರು.
ಇನ್ನು “ದೇವರು ತನ್ನ ಕೆಲಸವನ್ನ ಮಾಡಲು ನನ್ನನ್ನು ಕಳುಹಿಸಿದ್ದರಿಂದ ನಾನು ಈ ಶಕ್ತಿಯನ್ನ ಪಡೆಯುತ್ತಿದ್ದೇನೆ” ಎಂದರು.


ಪ್ರಧಾನಿ ನರೇಂದ್ರ ಮೋದಿ ಮತ್ತು ರುಬಿಕಾ ಲಿಯಾಖತ್ ಅವರ ಸಂದರ್ಶನದ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಚರ್ಚೆಗಳ ಸುರಿಮಳೆಗೆ ಕಾರಣವಾಗಿದೆ.

ವೈರಲ್ ವಿಡಿಯೋ ನೋಡಿ.!
प्रधानमंत्री जी आप थकते क्यूँ नहीं हैं? pic.twitter.com/KV9QePeV8c
— Rubika Liyaquat (@RubikaLiyaquat) May 21, 2024