ಪಿ.ಎಂ.ಆವಾಸ್ ಯೋಜನೆಯಡಿ ಸಹಾಯಧನ: ಅರ್ಜಿ ಆಹ್ವಾನ

0 0
Read Time:1 Minute, 48 Second

 ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ “ಸರ್ವರಿಗೂ ಸೂರು” ಒದಗಿಸಲು 2024 ರ ಸೆಪ್ಟಂಬರ್ 1 ರಿಂದ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಮುಂದಿನ 05 ವರ್ಷಗಳಲ್ಲಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಬಡವರು, ಕೊಳಚೆ ನಿವಾಸಿಗಳನ್ನು ಒಳಗೊಂಡಂತೆ ಮಧ್ಯಮ ವರ್ಗದವರಿಗೆ ಸೂರು ಒದಗಿಸಲು ಸಹಾಯಧನ ಒದಗಿಸಲಾಗುವುದು.

ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರು ಮತ್ತು ನಿವೇಶನ ರಹಿತರು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ ಯುನಿಫೈಡ್ ವೆಬ್ ಪೋರ್ಟಲ್ ನಲ್ಲಿಯೂ ಸಹ ಫಲಾನುಭವಿಗಳು ಸ್ವ-ಇಚ್ಛೆಯಿಂದ ಅಥವಾ ಸೇವಾ ಸಿಂಧು ಮತ್ತು ಗ್ರಾಮ-1 ಮೂಲಕ ಕೂಡ https://pmay-urban.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು: ಆಧಾರ್ ಕಾರ್ಡ್ ಪ್ರತಿ, ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ, ಸೆಲ್ಫ್ ಡಿಕ್ಲರೇಷನ್ ಫಾರ್ಮ್ ಸಲ್ಲಿಸುವುದು, ಮೊಬೈಲ್ ಸಂಖ್ಯೆ ಹಾಗೂ ಲಭ್ಯವಿದ್ದಲ್ಲಿ ಪ್ಯಾನ್ ಕಾರ್ಡ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಪು ಪುರಸಭಾ ಕಚೇರಿಯ ಡೇ-ನಲ್ಮ್(ವಸತಿ) ಶಾಖೆಯನ್ನು ಕಛೇರಿ ವೇಳೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ಒಳಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *