ಪಿಕಪ್ ವ್ಯಾನ್-ಕ್ರೇನ್ ನಡುವೆ ಅಪಘಾತ- ಪಿಕಪ್ ವ್ಯಾನ್ ಚಾಲಕ ಮೃತ್ಯು

0 0
Read Time:1 Minute, 3 Second

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಸಮೀಪ ಪಿಕಪ್ ವ್ಯಾನ್ ಹಾಗೂ ಕ್ರೇನ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಕಪ್ ವ್ಯಾನ್ ಚಾಲಕ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಚಾಲಕ ಅಣಂಗೂರು ಬೆದಿರ ನಿವಾಸಿ ನಿಯಾಝ್ ( 42) ಎಂದು ಗುರುತಿಸಲಾಗಿದೆ.

ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ಧ ನಿಯಾಝ್ ಶನಿವಾರ ಸಂಜೆ ಮೃತಪಟ್ಟರು. ಶುಕ್ರವಾರ ಮಧ್ಯಾಹ್ನ ಅಪಘಾತ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಸ್ತೆ ಬದಿ ನಿಲ್ಲಿಸಿದ್ದ ಕ್ರೇನ್ ನ ಹಿಂಬದಿಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ನಜ್ಜು ಗುಜ್ಜಾದ ಪಿಕಪ್ ವ್ಯಾನ್ ನಲ್ಲಿ ಸಿಲುಕಿದ್ದ ಚಾಲಕನನ್ನು ಅಗ್ನಿ ಶಾಮಕ ದಳದವರು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *