ಪೆರ್ಲ ಪೇಟೆಯಲ್ಲಿ ರಾತ್ರಿ ಅಗ್ನಿ ಅವಘಡ..! ಐದು ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿ

0 0
Read Time:1 Minute, 49 Second

ಪುತ್ತೂರು: ಪೆರ್ಲ ಪೇಟೆಯ ಕಟ್ಟಡವೊಂದಕ್ಕೆ ಶನಿವಾರ ತಡ ರಾತ್ರಿ ಬೆಂಕಿ ಹತ್ತಿಕೊಂಡಿದ್ದು ಐದು ಅಂಗಡಿಗಳು ಸಂಪೂರ್ಣವಾಗಿ ಹೊತ್ತಿ ಉರಿದು ನಾಶವಾಗಿದೆ. 

ಇಲ್ಲಿನ ಬದಿಯಡ್ಕ ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೂಜಾ ಫ್ಯಾನ್ಸಿ, ಪೈಗಳ ಕ್ಲೋತ್ ಸ್ಟೋರ್ ಸಹಿತ ಪೇಪರ್ ವಿತರಣ ಸೆಂಟರ್,ಪ್ರವೀಣ್ ಆಟೋಮೊಬೈಲ್ಸ್,ಸದಾತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಎಂಬಿ ಅಂಗಡಿ ಮುಂಗಟ್ಟು ಈ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. 

ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಸೇರಿದ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಸಮೀಪದ ಕಟ್ಟಡಗಳಿಗೂ ಹಬ್ಬುವ ಪರಿಸ್ಥಿತಿ ಇದ್ದು ಮಂಜೇಶ್ವರ ಮತ್ತು ಕಾಸರಗೋಡಿನಿಂದ ನಾಲ್ಕೈದು ಅಗ್ನಿಶಾಮಕ ದಳಗಳು ಬಂದಿದ್ದು ಸುಮಾರು ನಾಲ್ಕು ಗಂಟೆಗಳ ಸತತ ಪ್ರಯತ್ನದಿಂದ ಬೆಂಕಿ ನಂದಿಸಲಾಗಿತ್ತು.

ಬೆಂಕಿ ಉರಿಯುವ ವೇಳೆ ಊರವರು ಜಮಾಯಿಸಿದ್ದು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದರು. ಯಾವ ಕಾರಣಕ್ಕೆ ಬೆಂಕಿ ಎಲ್ಲಿಂದ ಹತ್ತಿಕೊಂಡಿದೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ ಶಾರ್ಟ್ ಶಾರ್ಕ್ಯೂಟ್ ನಿಂದ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸ್ಥಳದಲ್ಲಿದ್ದು ಪೆರ್ಲದ ಹಲವು  ಸಂಘ ಸಂಸ್ಥೆಗಳು ನಾಗರಿಕರು ರಕ್ಷಣಾ ಕಾರ್ಯಕ್ಕೆ ನೇತೃತ್ವಹಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *