
Read Time:47 Second
ಹೈದರಾಬಾದ್- ನರೇಂದ್ರ ಮೋದಿ ನಮ್ಮ ದೇಶಕ್ಕೆ ಏನು ಮಾಡಿದ್ದಾರೆ ಎಂಬ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ನನ್ನ ಬೆಂಬಲ ಎಂದೆಂದಿಗೂ ನರೇಂದ್ರ ಮೋದಿಗೆ. ಪ್ರಧಾನಿ ಹುದ್ದೆಯ ಆಫರ್ ಕೊಟ್ಟರೂ ನಾನು ಕಾಂಗ್ರೆಸ್ ಎಂದೆಂದೂ ಬೆಂಬಲ ನೀಡೋದಿಲ್ಲ ಎಂದು ಜನಸೇನಾ ನಾಯಕ ಹಾಗೂ ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ‘ಇಂಡಿ’ ಮೈತ್ರಿಕೂಟವನ್ನು ಬೆಂಬಲಿಸಲು ನಮಗೆ ಅವರು ಬಹುದೊಡ್ಡ ಕೊಡುಗೆಯನ್ನೇ ನೀಡಬಹುದು. ಆದರೆ ನಾವು ದೇಶಕ್ಕಾಗಿ ನಾವು ಎಂದೆಂದೂ ಮೋದಿ ಅವರನ್ನೇ ಬೆಂಬಲಿಸುತ್ತೇವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ

