
ಮೂಡುಬಿದಿರೆ: ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೋದ ಮಹಿಳೆಯೊಬ್ಬರು ಸೆ.10ರಂದು ನಾಪತ್ತೆಯಾಗಿದ್ದಾರೆ. ಮೂಡುಬಿದಿರೆ ಕಡಂದಲೆ ಗ್ರಾಮದ ಪೂಪಾಡಿಕಲ್ಲಿನ ಪವಿತ್ರಾ (29) ನಾಪತ್ತೆಯಾದ ಮಹಿಳೆ.


ಇವರು ಬುಧವಾರ ಬೆಳಿಗ್ಗೆ ತನ್ನ ಮಗ ಹಾಗೂ ತಂಗಿಯ ಮಗನನ್ನು ಕಡಂದಲೆ ವಿದ್ಯಾಗಿರಿ ಶಾಲೆಗೆ ಬಿಡಲು ಹೋಗಿದ್ದು ಬಳಿಕ ಮನೆಗೆ ಹಿಂದಿರುಗಲಿಲ್ಲ. ಮನೆಯವರು ಎಷ್ಟೇ ಕಾಲ್ ಮಾಡಿದ್ರೂ ಕೂಡಾ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಸುಪಾಸಿನವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಪವಿತ್ರಾ ತಂದೆ ಕೇಶವ ಶೆಟ್ಟಿಗಾರ್ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪವಿತ್ರಾ 5.5 ಅಡಿ ಎತ್ತರವಾಗಿದ್ದು ಕೋಲು ಮುಖ, ಸಪೂರ ಶರೀರ, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಹಾಗೆಯೇ ತುಳು ಹಾಗೂ ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾದ ದಿನ ಇವರು ಕೇಸರಿ ಬಣ್ಣದ ಚೂಡಿದಾರ್ ಧರಿಸಿದ್ದರೆಂದು ತಿಳಿದುಬಂದಿದೆ. ಮಹಿಳೆಯ ಸುಳಿವು ಸಿಕ್ಕಲ್ಲಿ ಠಾಣೆಯ 9480802314 ಈ ನಂಬರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.