ಪಾಸ್‌ಪೋರ್ಟ್ ಮಾಡಿಸಲು ಇನ್ಮುಂದೆ ಜನನ ಪ್ರಮಾಣಪತ್ರ ಕಡ್ಡಾಯ..!

0 0
Read Time:5 Minute, 15 Second

ಭಾರತದಲ್ಲಿ ಪಾಸ್‌ಪೋರ್ಟ್ ವಿದೇಶ ಪ್ರವಾಸಕ್ಕಾಗಿ ಪ್ರಮುಖ ದಾಖಲೆಯಾಗಿದೆ. ಇದು ಇಲ್ಲದೆ, ನೀವು ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನೀವು ಪಾಸ್‌ಪೋರ್ಟ್ ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದು.

ವಿದೇಶಾಂಗ ಸಚಿವಾಲಯ ಫೆ. 24ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.

ಭಾರತದಲ್ಲಿ ಪಾಸ್‌ಪೋರ್ಟ್ ಪಡೆಯಲು ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು,2023ರ ಅಕ್ಟೋಬರ್ 1ರಿಂದ, ಜನಿಸಿದವರಿಗಾಗಿ ಪಾಸ್‌ಪೋರ್ಟ್ ಅರ್ಜಿಗೆ ಜನನ ಪ್ರಮಾಣಪತ್ರ (Birth Certificate) ಕಡ್ಡಾಯವಾಗಿದ್ದು,ಈ ನಿಯಮವನ್ನು ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ.

1980ರ ಪಾಸ್‌ಪೋರ್ಟ್ ನಿಯಮಗಳನ್ನು ಸರ್ಕಾರ ತಿದ್ದುಪಡಿ ಮಾಡಿದ್ದು, ಜನನ ಮತ್ತು ಮರಣಗಳ ನೋಂದಣಿ, ನಗರ ಪಾಲಿಕೆ ಅಥವಾ ಇತರ ಯಾವುದೇ ಪ್ರಾಧಿಕಾರವು ನೀಡುವ ಜನನ ಪ್ರಮಾಣಪತ್ರಗಳನ್ನು ಪಾಸ್‌ಪೋರ್ಟ್ ಅರ್ಜಿಗಳಿಗೆ ಜನ್ಮ ದಿನಾಂಕದ ಏಕೈಕ ಪುರಾವೆಯನ್ನಾಗಿ ಮಾಡಲು ನಿರ್ಧರ ಮಾಡಿದೆ.

ಭಾರತ ದೇಶ ಈಗ ವಿಶ್ವದಲ್ಲಿ ಮನ್ನಣೆ ಸಿಕ್ಕಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಜಾಗತಿಕವಾಗಿ 80ನೇ ಸ್ಥಾನದಲ್ಲಿದೆ. ಭಾರತವು ಈಗ ಪಾಸ್‌ಪೋರ್ಟ್ ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿದೆ.ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಸಹ ಹೊರಡಿಸಿದೆ.

ನೀವು ವಿದೇಶ ಪ್ರವಾಸಕ್ಕೆ ಹೋಗಲು ಅಥವಾ ವಿದೇಶದಲ್ಲಿ ಕೆಲಸ ಅಥವಾ ಅಧ್ಯಯನ ಮಾಡಲು ಪಾಸ್‌ಪೋರ್ಟ್ ಅಗತ್ಯವಿದೆ. ಹೀಗೆ, ಪಾಸ್‌ಪೋರ್ಟ್ ಹೊಂದಿದರೆ ಮಾತ್ರ ನೀವು ವೀಸಾ ಅಥವಾ ಇತರ ಪ್ರಯಾಣದ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಅನುಕೂಲವಾಗಿದೆ.

ಅಕ್ಟೋಬರ್ 1 2023ರ ನಂತರ ಜನಿಸಿದ ವ್ಯಕ್ತಿಗಳಿಗೆ ಮಾತ್ರ ಜನ್ಮ ದಿನಾಂಕದ ಪುರಾವೆ ಕಡ್ಡಾಯ

ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿರುವ 2025ರ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳ ಪ್ರಕಾರ ಅಕ್ಟೋಬರ್ 1, 2023 ರ ನಂತರ ಜನಿಸಿದವರು ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರವನ್ನು ಹೊಂದಿರಬೇಕು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಜನನ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಈ ಜನನ ಪ್ರಮಾಣಪತ್ರವನ್ನು ಸಹ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ, ಜನ್ಮ ದಿನಾಂಕವನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ, ಅಕ್ಟೋಬರ್ 1, 2023 ರ ನಂತರ ಜನಿಸಿದವರು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗುವುದಿಲ್ಲ.

ಎಲ್ಲಿ ಜನನ ಪ್ರಮಾಣ ಪತ್ರ ಪಡೆಯಬೇಕು?

ಜನನ ಮತ್ತು ಮರಣ ನೋಂದಣಿದಾರು ಪುರಸಭೆ ಅಥವಾ 1969 ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯಡಿಯಲ್ಲಿ ನೀಡಿದ ಜನನ ಪ್ರಮಾಣಪತ್ರವನ್ನು ಪರಿಗಣಿನೆಗೆ ತಗೆದುಕೊಳ್ಳಲಾಗುತ್ತದೆ. ಅಕ್ಟೋಬರ್ 1, 2023 ರ ನಂತರ ಜನಿಸಿದವರಲ್ಲಿ ಹೆಚ್ಚಿನವರು ಜನನ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಇಲ್ಲದಿದ್ದರೂ ಸಹ, ಪಾಸ್‌ಪೋರ್ಟ್ ಪಡೆಯಲು, ಪುರಸಭೆಯ ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳಿಂದ ಪತ್ರವನ್ನು ಪಡೆಯಬೇಕಾಗುತ್ತದೆ.

ಈ ಹಿಂದೆ ಪಾಸ್‌ಪೋರ್ಟ್ ಮಾಡಿಸಲು ಜನ್ಮ ದಿನಾಂಕದ ಪುರಾವೆಯಾಗಿ ಚಾಲನಾ ಪರವಾನಗಿ ಅಥವಾ 10 ನೇ ತರಗತಿಯ ಶಾಲಾ ಪ್ರಮಾಣಪತ್ರವನ್ನು ನೀಡಬಹುದಿತ್ತು. ಅಕ್ಟೋಬರ್ 1, 2023 ರ ಮೊದಲು ಜನಿಸಿದವರಿಗೆ ಈ ನಿಯಮ ಇನ್ನೂ ಅನ್ವಯಿಸುತ್ತದೆ. ಅದರ ನಂತರ ಜನಿಸಿದವರಿಗೆ ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಹೊಸ ನಿಯಮಕ್ಕೆ ಗಮನಕೊಡಬೇಕಾಗುತ್ತದೆ. ಇಲ್ಲವಾದಲೇ ಕೊನೆಯ ಕ್ಷಣದಲ್ಲಿ ಹೆಚ್ಚಿನ ತೊಂದರೆಗಳು ಆಗಬಹುದು.

ಭಾರತದಲ್ಲಿ ಮೂರು ರೀತಿಯ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ ಅವುಗಳೆಂದರೆ,

ಸಾಮಾನ್ಯ, ಅಧಿಕೃತ ಮತ್ತು ರಾಜತಾಂತ್ರಿಕ

ಸಾಮಾನ್ಯ ಪಾಸ್‌ಪೋರ್ಟ್: ಸಾಮಾನ್ಯ ನಾಗರಿಕರಿಗೆ. ಇದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ಅಧಿಕೃತ ಪಾಸ್‌ಪೋರ್ಟ್: ಸರ್ಕಾರಿ ಅಧಿಕಾರಿಗಳ ವಿದೇಶ ಪ್ರಯಾಣಕ್ಕಾಗಿ ಅಧಿಕೃತ ಪಾಸ್‌ಪೋರ್ಟ್ ನೀಡಲಾಗುತ್ತದೆ.

ರಾಜತಾಂತ್ರಿಕ: ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಲಾಗುತ್ತದೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *