Headlines

ಬೆಳ್ತಂಗಡಿ: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

ಬೆಳ್ತಂಗಡಿ: ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್‌ ನಿವಾಸಿ ದೇವಪ್ಪ ಬಂಗೇರ ಅವರ ಪುತ್ರಿ ರಮ್ಯಾ (33) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ಕೊಯ್ಯೂರು ಗ್ರಾಮದ ಪಾದಡ್ಕ ನಿವಾಸಿ ಲತೀಶ್‌ ಗೆ ಮದುವೆ ಮಾಡಿಕೊಡಲಾಗಿತ್ತು. ರಮ್ಯಾ ಬೆಳ್ತಂಗಡಿ ಮುಗುಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮ್ಯಗೆ ಅನಾರೋಗ್ಯ ಕಾಡುತ್ತಿದ್ದು, ತಾಯಿ ಮನೆಗೆ ಬಂದಿದ್ದ ರಮ್ಯಾ ನೊಂದು…

Read More

ವಿಶ್ವದ ಪ್ರತಿಷ್ಠಿತ ರೋಲ್ಸ್ ರಾಯ್ಸ್‌ ನಲ್ಲಿ ಉದ್ಯೋಗ ಪಡೆದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೆ.ಎಸ್. ರಿತುಪರ್ಣ

ಮಂಗಳೂರು:ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕರಾವಳಿ ಕನ್ನಡತಿಯೋರ್ವಳು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಪಡೆದ ಕರಾವಳಿಯ 20 ವರ್ಷದ ಕಿರಿಯ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕೆ.ಎಸ್. ರಿತುಪರ್ಣ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಪ್ರಮುಖ ರೋಲ್ಸ್ ರಾಯ್ಸ್‌ನಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ಸಂಬಳದ ಕೆಲಸವನ್ನು ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿಯಾಗಿರುವ ರಿತುಪರ್ಣಗೆ ಬಾಲ್ಯದಲ್ಲಿ ವೈದ್ಯೆ ಆಗಬೇಕು ಎಂದು ಕನಸು ಇತ್ತು. ಆದರೆ ಕಾರಣಾಂತರಗಳಿಂದ…

Read More

ಶಾರೂಖ್‌ ಖಾನ್ ರೋಹನ್ ಕಾರ್ಪೊರೇಷನ್ ಬ್ರಾಂಡ್ ಅಂಬಾಸಿಡರ್ ಆಗಿ ಅಧಿಕೃತವಾಗಿ ಘೋಷಣೆ: ಮಂಗಳೂರಿನಲ್ಲಿ ಕಾರ್ಯಕ್ರಮ

ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‌ ಖಾನ್ ಅವರನ್ನು ತನ್ನ ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಜುಲೈ 12 ರಂದು ಘೋಷಣೆ ಮಾಡಿತು. ಈ ಬಹು ನಿರೀಕ್ಷಿತ ಕಾರ್ಯಕ್ರಮವು, ಮಂಗಳೂರಿನ ಬಿಜೈ ಭಾರತ್ ಮಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಮತ್ತು ಸಿನಿಮಾ ಜಗತ್ತಿನ ತಾರೆಗಳು ಭಾಗವಹಿಸಿದ್ದರು. ಈ ಘೋಷಣೆ ವಿಶೇಷ ಏಕೆಂದರೆ…

Read More

ಮಂಗಳೂರು: ವಿಚ್ಛೇದನ ಕೋರಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದ ಲೋಕ ಅದಾಲತ್

ಮಂಗಳೂರು: ಮಂಗಳೂರಿನಲ್ಲಿ ನಡೆದ ಲೋಕ ಅದಲಾತ್ ನಲ್ಲಿ ಹಲವಾರು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಗಂಡ ಹೆಂಡತಿಯನ್ನು ಮತ್ತೆ ಒಂದಾಗಿದ್ದಾರೆ. ಮಂಗಳೂರಿನ ನ್ಯಾಯಾಲಯದಲ್ಲಿ ಇಂದು ನಡೆದ ಲೋಕಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಭಟ್ ಕೆ, ಅದಲತ್ ಸದಸ್ಯರಾದ ಶ್ರೀಮತಿ ಕೆ ಎಸ್ ಗೌರಿ ರವರು ಕೌಟುಂಬಿಕ ಸಮಸ್ಯೆಯಿಂದ ಬೇರೆ ಬೇರೆಯಾದ ಗಂಡ ಹೆಂಡತಿಯನ್ನು ಒಟ್ಟುಗೂಡಿಸಿದ ಪ್ರಸಂಗ ನಡೆಯಿತು. ಕಾವೂರು ನಿವಾಸಿ ಹನುಮಂತ ಹೂಗಾರ್ ಮತ್ತು ಬಿಜೈ ನಿವಾಸಿ ಸಾವಿತ್ರಿ ಹೂಗಾರ್ ರವರು ಮದುವೆಯಾಗಿ…

Read More

ಮಧ್ಯಮ ವರ್ಗದ ಜನತೆಗೆ ಬಿಗ್ ರಿಲೀಫ್ ..!! ಅಗತ್ಯ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ : ಮಧ್ಯಮ ಮತ್ತು ಕಡಿಮೆ ಆದಾಯದ ಗ್ರಾಹಕರಿಗೆ ಶೀಘ್ರದಲ್ಲೇ ಸ್ವಲ್ಪ ಪರಿಹಾರ ಸಿಗಬಹುದು. ಜಿಎಸ್‌ಟಿ ಕೌನ್ಸಿಲ್ ಮುಂಬರುವ ಸಭೆಯಲ್ಲಿ ಸಾಮಾನ್ಯವಾಗಿ ಬಳಸುವ ಹಲವಾರು ಗೃಹೋಪಯೋಗಿ ಉತ್ಪನ್ನಗಳ ಮೇಲಿನ ತೆರಿಗೆ ದರಗಳನ್ನ ಪರಿಶೀಲಿಸುವ ಮತ್ತು ಬಹುಶಃ ಕಡಿಮೆ ಮಾಡುವ ನಿರೀಕ್ಷೆಯಿದೆ. ಸರ್ಕಾರ ಎಂಟು ವರ್ಷಗಳಷ್ಟು ಹಳೆಯದಾದ ಸರಕು ಮತ್ತು ಸೇವಾ ತೆರಿಗೆ (GST) ರಚನೆಯನ್ನ ಪರಿಶೀಲಿಸುತ್ತಿದ್ದು, ಪ್ರಸ್ತುತ 12% ತೆರಿಗೆ ಸ್ಲ್ಯಾಬ್‌’ನಲ್ಲಿರುವ ಗ್ರಾಹಕ ಸರಕುಗಳ ಮೇಲಿನ ತೆರಿಗೆ ದರವನ್ನ ಕಡಿಮೆ ಮಾಡುವತ್ತ ಒತ್ತು ನೀಡಿದೆ. ಈ ಸ್ಲ್ಯಾಬ್‌’ನಲ್ಲಿ…

Read More

ಮಂಗಳೂರು: ಎಂಆರ್‌ಪಿಎಲ್‌ ಘಟಕದಲ್ಲಿ ಗ್ಯಾಸ್‌ ಸೋರಿಕೆ; ಇಬ್ಬರು ಮೃತ್ಯು, ಓರ್ವ ಗಂಭೀರ..!

ಮಂಗಳೂರು: ಸುರತ್ಕಲ್‌ನ ಎಂಆರ್‌ಪಿಎಲ್ ಘಟಕದಲ್ಲಿ ಗ್ಯಾಸ್‌ ಸೋರಿಕೆಯಿಂದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ ದೀಪ ಚಂದ್ರ ಭರ್‌ ಮತ್ತು ಬಿಜಿಲ್ ಪ್ರಸಾದ್ ಸಾವನ್ನಪ್ಪಿದ ಸಿಬ್ಬಂದಿ. ಮಂಗಳೂರು ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ಘಟನೆ ನಡೆದಿದೆ. ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಪರಿಶೀಲನೆಗೆಂದು ಸಿಬ್ಬಂದಿ ತೆರಳಿದ್ದರು. ಟ್ಯಾಂಕ್ ಮೇಲ್ಛಾವಣಿಗೆ ಹೋದ ಬೆನ್ನಲ್ಲೇ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರ…

Read More

ಅಹಮದಾಬಾದ್ ವಿಮಾನ ದುರಂತಕ್ಕೆ ಇದೇ ಕಾರಣ: ತನಿಖಾ ವರದಿಯಲ್ಲಿ ಅಚ್ಚರಿಯ ಅಂಶ ಬಯಲು

ನವದೆಹಲಿ: ಅಹಮದಾಬಾದ್‌ನಲ್ಲಿ ಜೂನ್ 12 ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿರುವ ಮಾಹಿತಿ ಬಹಿರಂಗವಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡವು. ಆ ನಂತರ ವಿಮಾನ ಪತನವಾಗಿದೆ. ವಿಮಾನದ ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಎಎಐಬಿ ಗಮನಸೆಳೆದಿದೆ….

Read More

ಪುತ್ತೂರು: ತೀರ ಹದಗೆಟ್ಟ ಇಡಿಂಜಿಲ ನೆಲ್ಲಿತಡ್ಕ ರಸ್ತೆ.! ಗ್ರಾಮಸ್ಥರ ಆಕ್ರೋಶ

ಪುತ್ತೂರು: ಒಳಮೊಗ್ರು ಗ್ರಾಮದ ಇಡಿಂಜಿಲ ನೆಲ್ಲಿತಡ್ಕ ರಸ್ತೆ ತೀರ ಹದ ಗೆಟ್ಟಿದ್ದು, ನಡೆದಾಡಲಿಕ್ಕೂ ಆಗದ ಪರಿಸ್ಥಿತಿ ಬಂದಿದೆ. ಶಾಲಾ ಮಕ್ಕಳ ಪಾಡಂತೂ ಹೇಳತೀರದು ಎಂದು ನಾಗರಿಕರು ಅಳವತ್ತುಕೊಳ್ಳುತ್ತಿದ್ದಾರೆ. ಪುಟ್ಟ ಪುಟ್ಟ ಶಾಲಾ ಮಕ್ಕಳನ್ನು ತುಂಬಿಕೊಂಡು ಶಾಲಾ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತದೆ. ಅಷ್ಟೆ ಅಲ್ಲದೆ ಆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವಾಗ ರಿಕ್ಷಾದ ಚಕ್ರಗಳು ಜಾರುವುದರಿಂದ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವುದರಲ್ಲಿ ಸಂಶಯವಿಲ್ಲ. ಹಲವು ಬಾರಿ ವಾಹನಗಳು ಕೆಸರಿನಲ್ಲಿ ಹೂತಕೊಂಡು ಮುಂದೆ ಸಾಗಲಾರದೆ ಸ್ಥಳೀಯರು ಸೇರಿ ದೂಡಿದ…

Read More

ಸುಳ್ಯ: ಜ್ವರವೆಂದು ಚಿಕಿತ್ಸೆಗೆ ಬಂದ13 ವರ್ಷದ ಬಾಲಕಿಗೆ ಗರ್ಭಿಣಿ ಎಂದು ವರದಿ..!

ತೀವ್ರ ಜ್ವರದ ಹಿನ್ನೆಲೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿ ಗರ್ಭಿಣಿ ಎಂದು ವರದಿ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಸುಳ್ಯದಲ್ಲಿ ನಡೆದ ಘಟನೆ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ. ಜ್ವರದಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಯನ್ನು ಆಕೆಯ ಹೆತ್ತವರು ಚಿಕಿತ್ಸೆಗಾಗಿ ಜು. 1ರಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು,. ಅಲ್ಲಿನ ಕರ್ತವ್ಯ ವೈದ್ಯಾಧಿಕಾರಿ ಬಾಲಕಿಯನ್ನು ತಪಾಸಣೆ ಮಾಡಿದ ಅನಂತರ ಹೊರ ರೋಗಿಗಳ ದಾಖಲಾತಿಯಲ್ಲಿ ಯುಪಿಟಿ ಪಾಸಿಟಿವ್ (ಗರ್ಭಿಣಿ) ಎಂದು ಬರೆದಿದ್ದು,…

Read More

ಮಂಗಳೂರು: ಬಹು ನಿರೀಕ್ಷಿತ “ಧರ್ಮಚಾವಡಿ” ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ!

ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಮೂಡಿ ಬಂದಿರುವ “ಧರ್ಮ ಚಾವಡಿ” ತುಳು ಚಿತ್ರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು “ಆತ್ಮೀಯ ಮಿತ್ರ ನಿತಿನ್ ರೈ ಕುಕ್ಕುವಳ್ಳಿ ಅವರು ಮಾಡಿರುವ ಮೊದಲ ಸಿನಿಮಾ “ಧರ್ಮ ದೈವ” ತುಳುವರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂದು…

Read More